ಮಂಜೇಶ್ವರ : ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೆದದಲ್ಲಿ ಸೇರಿಸಲು ಕೇರಳ ತುಳು ಅಕಾಡೆಮಿ ನೇತೃತ್ವದಲ್ಲಿ ಹೋರಾಟ ನಡೆಸಲು ಮುಂದಾಗುವುದಾಗಿ ಅಕಾಡೆಮಿ ಅಧ್ಯಕ್ಷ ಉಮೇಶ್ ಎಮ್ ಸಾಲಿಯಾನ್ ಹೇಳಿದರು.
ತುಳು ಅಕಾಡೆಮಿಯ ರಾಮಣ್ಣ ರೈ ಚಾವಡಿಯಲ್ಲಿ ಸೋಮವಾರ ನಡೆದ ತುಳು ಕ್ಯಾಲೆಂಡರ್ (ತುಳು ಕಾಲ ಕೋಂದೆ)ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚ ದ್ರಾವಿಡ ಭಾಷೆಗಳಲ್ಲಿ ಅತೀ ಪ್ರಾಚೀನ ಭಾಷೆಯಾಗಿರುವ ತುಳು ಕೃಷಿಕರ, ಕಾರ್ಮಿಕರ ಆಡು ಭಾಷೆಯಾಗಿದೆ. ಸಾಹಿತ್ತಿಕವಾಗಿ ಅದು ಮೌಲಿಕವಾಗಿದೆ. ಈ ಭಾಷೆಯನ್ನು ಪೋಶಿಸಿದರೆ ಸಂಸ್ಕೃತಿಯನ್ನು ಪೋಷಿಸಿದಂತೆ. ಭಾರತೀಯ ಇತರ ಭಾಷೆಗಳ ಸಾಲಿಗೆ ಸೇರಬೇಕಾದರೆ ಇದನ್ನು ಸಂವಿಧಾನದ ಎಂಟನೇ ಪರಿಚ್ಛೆದಕ್ಕೆ ಸೇರಿಸಿ ಮಾನ್ಯತೆ ಕಲ್ಪಿಸಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ವಿರೋಧಿ ನಿಲುವು ತಾಳಿದರೆ ಅಕಾಡೆಮಿಯ ನೇತೃತ್ವದಲ್ಲಿ ಜನಪರ ಹೋರಾಟಕ್ಕೆ ಮುಂದಾಗುವುದಾಗಿ ಉಮೇಶ್ ಎಮ್ ಸಾಲಿಯಾನ್ ಹೇಳಿದರು.
ತುಳು ಕಾಲ ಕೋoದೆಯನ್ನು ಬಿಡುಗಡೆ ಗೊಳಿಸಿ ಮೊದಲ ಪ್ರತಿಯನ್ನು ಮೀoಜ ಗ್ರಾಮ ಪಂಚಾಯತಿ ಅಧ್ಯೆಕ್ಷೆ ಸುಂದರಿ ಆರ್ ಶೆಟ್ಟಿಯವರಿಗೆ ನೀಡಲಾಯಿತು.
ಕಾಲ ಕೋಂದೆಯನ್ನು ರಚಿಸಿದ ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷಾರತ ಸಮಿತಿ ನಿರ್ದೇಶಕ ಪ್ರವೀಣ್ ಎಸ್ ರಾವ್ ಅವರನ್ನು ತುಳು ಅಕಾಡೆಮಿ ವತಿಯಿಂದ ಸ್ಮರಣಿಕೆ ನೀಡಿ ಅಭಿನಂಧಿಸಲಾಯಿತು. ಕ್ಯಾಲೆಂಡರ್ ರಚನೆಯ ಹಿನ್ನಲೆ ಮತ್ತು ಅನುಭವ ಗಳನ್ನು ಪ್ರವೀಣ್ ಎಸ್ ರಾವ್ ರವರು ಹಂಚಿಕೊಂಡರು. ಪಾರ್ಥಿಅಕಾಡೆಸುಬ್ಬ ಯಕ್ಷ ಗಾನ ಕಲಾಕ್ಷೇತ್ರ ಸಮಿತಿ ಕಾರ್ಯದರ್ಶಿ ಡಿ. ಬೂಬ, ಅಕಾಡೆಮಿ ಸದಸ್ಯೆ ಸಚಿತಾ ರೈ ಪೆರ್ಲ ಶುಭಹಾರೈಸಿದರು.