ತಿರುವನಂತಪುರ: ಕೇರಳದಲ್ಲಿ ಆಡಳಿತಾರೂಢ ಸಿಪಿಐ(ಎಂ) ಪಕ್ಷದ ಸಭೆಗಳಲ್ಲಿ ಚೀನಾವನ್ನು ವೈಭವೀಕರಿಸಲಾಗುತ್ತಿದೆ ಎಂದು ಎನ್‌ಡಿಎ ಮಿತ್ರಪಕ್ಷ 'ಡೆಮಾಕ್ರಟಿಕ್ ಪಾರ್ಟಿ' ಆರೋಪಿಸಿದೆ.
ಕೇರಳದಲ್ಲಿ ಚೀನಾವನ್ನು ವೈಭವೀಕರಿಸುತ್ತಿರುವ ಸಿಪಿಐಎಂ: ಬಿಜೆಪಿಯ ಮಿತ್ರಪಕ್ಷ ಆರೋಪ
0
ಜನವರಿ 23, 2022
Tags
ತಿರುವನಂತಪುರ: ಕೇರಳದಲ್ಲಿ ಆಡಳಿತಾರೂಢ ಸಿಪಿಐ(ಎಂ) ಪಕ್ಷದ ಸಭೆಗಳಲ್ಲಿ ಚೀನಾವನ್ನು ವೈಭವೀಕರಿಸಲಾಗುತ್ತಿದೆ ಎಂದು ಎನ್‌ಡಿಎ ಮಿತ್ರಪಕ್ಷ 'ಡೆಮಾಕ್ರಟಿಕ್ ಪಾರ್ಟಿ' ಆರೋಪಿಸಿದೆ.
'ಅವರು (ಸಿಪಿಐಎಂ) ದೇಶದ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯವನ್ನು ಅನುಭವಿಸಿಕೊಂಡು ಪಕ್ಷದ ಜಿಲ್ಲಾ ಮಟ್ಟದ ಸಭೆಗಳಲ್ಲಿ ಚೀನಾವನ್ನು ವೈಭವೀಕರಿಸುತ್ತಿದ್ದಾರೆ.
'ಚೀನಾವನ್ನು ಹೊಗಳಲು ಆ ದೇಶದಿಂದ ಅವರಿಗೆ (ಸಿಪಿಐಎಂ) ಹಣಕಾಸು ನೆರವು ದೊರೆಯುತ್ತಿದೆಯೇ ಎಂಬ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು' ಎಂದು ಅವರು ಒತ್ತಾಯಿಸಿದ್ದಾರೆ.
ಚೀನಾ ಕುರಿತ ನಿಲುವು ಏನೆಂಬುದನ್ನು ಬಹಿರಂಗಪಡಿಸುವಂತೆ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಕಳೆದ ವಾರ ಸಿಪಿಐ(ಎಂ) ಅನ್ನು ಆಗ್ರಹಿಸಿದ್ದರು.