ಬದಿಯಡ್ಕ: ತನಗೆ ಲಭಿಸಿದ ದೈವಿಕ ಅನುಗ್ರಹವನ್ನು ನಾಡಿನ ಜನತೆಗೆ ನೀಡಿ ಧೀಮಂತನಾಗಿ ಯಾರಿಗೂ ಅಂಜದೆ, ಅಳುಕದೆ, ಆತ್ಮವಿಶ್ವಾಸ, ಶ್ರದ್ಧೆಯ ನಿಲುವಿನ ಮೂಲಕ ಮನುಷ್ಯನೂ ದೇವರಾಗಬಹುದು ಎಂಬುದನ್ನು ತೋರ್ಪಡಿಸಿದ ಮಹಾನ್ ವ್ಯಕ್ತಿ ಸಾಯಿರಾಂ ಭಟ್ ಎಂದು ಬಿಜೆಪಿ ಮುಖಂಡ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದರು.
ಶನಿವಾರ ನಿಧನರಾದ ಕೊಡುಗೈ ದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರಿಗಾಗಿ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಸೋಮವಾರ ಅಪರಾಹ್ನ ನಡೆದ ಸಂತಾಪಸೂಚಕ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಪ್ರಚಾರವನ್ನು ಬಯಸದೆ ದಾನಧÀರ್ಮಗಳನ್ನು ಮಾಡುತ್ತಾ ಜೀವನದಲ್ಲಿ ಆನಂದವನ್ನು ಕಂಡ ನಾಡಿನ ಸಜ್ಜನ, ದೈವತುಲ್ಯರಾದವರು ಎಂದು ಹೇಳುತ್ತಾ ಅವರಿಗೆ ಪರಮಾತ್ಮನು ಸದ್ಗತಿಯನ್ನು ನೀಡಲಿ ಎಂದರು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ. ಸಭೆÉಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಗ್ರಾಮಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್ ರೈ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಬದಿಯಡ್ಕ ವಿಭಾಗ ಸಂಘ ಚಾಲಕ ಶಿವಶಂಕರ ಭಟ್ ಗುಣಾಜೆ, ವಿವಿಧ ಪಕ್ಷಗಳ ಮುಖಂಡರಾದ ಎಂ.ಎಚ್.ಜನಾರ್ದನ, ಪಿ.ಜಿ.ಚಂದ್ರಹಾಸ ರೈ, ಎಂ.ಸುಧಾಮ ಗೋಸಾಡ, ಮಾಹಿನ್ ಕೇಳೋಟ್, ಸುಬೈರ್ ಬಾಪಾಲಿಪೊನಂ, ವ್ಯಾಪಾರಿವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ ನುಡಿನಮನಗೈದರು. ಜನಪ್ರತಿನಿಧಿಗಳಾದ ಅಶ್ವಿನಿ, ಜಯಂತಿ, ಬಾಲಕೃಷ್ಣ ಶೆಟ್ಟಿ, ಸೌಮ್ಯಾ ಮಹೇಶ್ ನಿಡುಗಳ, ಸ್ವಪ್ನಾ, ಈಶ್ವರ ಮಾಸ್ತರ್ ಪೆರಡಾಲ, ಹರೀಶ್ ನಾರಂಪಾಡಿ, ಮಹೇಶ್ ವಳಕ್ಕುಂಜ ಹಾಗೂ ಸಾಯಿರಾಂ ಭಟ್ ಅವರ ಅಭಿಮಾನಿಗಳು ಪಾಲ್ಗೊಂಡು ಪುಷ್ಪಾರ್ಚನೆಗೈದರು.