ಕಾಸರಗೋಡು: ಪಶುಸಂಗೋಪನಾ ಇಲಾಖೆ ವತಿಯಿಂದ ಜಿಲ್ಲೆಯ ಎರಡು ಬ್ಲಾಕ್‍ಗಳಲ್ಲಿನ ಮೃಗಾಸ್ಪತ್ರೆಗಳಲ್ಲಿ ಸಂಜೆ 6ರಿಂದ ಬೆಳಗ್ಗೆ 6ರ ವರೆಗೆ ವೆಟರಿನರಿ ವೈದ್ಯರನ್ನು ದಿನವೇತನ ಆಧಾರದಲ್ಲಿ ನೇಮಿಸಲಾಗುತ್ತಿದೆ.
ವೆಟರಿನರಿ ಸಯನ್ಸ್‍ನಲ್ಲಿ ಪದವಿಯೊಂದಿಗೆ ವೆಟರಿನರಿ ಕೌನ್ಸಿಲ್‍ನಲ್ಲಿ ನೋಂದಾವಣೆಗೊಂಡಿರಬೇಕಾಗಿದೆ. ಪ್ರತಿದಿನ 1425ರೂ.ನಂತೆ ಮಾಸಿಕ ಗರಿಷ್ಠ 38475ರೂ. ವೇತನ ನಿಗದಿಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಜ. 11ರಂದು ಮಧ್ಯಾಹ್ನ 2ಗಂಟೆಗೆ ವಿದ್ಯಾನಗರದ ಸಿವಿಲ್‍ಸ್ಟೇಶನ್‍ನಲ್ಲಿ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ಮೃಗಸಂರಕ್ಷಣಾ ಕಚೇರಿಯಲ್ಲಿ ನಡೆಯಲಿರುವ ಸಂದರ್ಶನದಲ್ಲಿ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 255483)ಸಂಪರ್ಕಿಸುವಂತೆ ಕೋರಲಾಗಿದೆ.