HEALTH TIPS

ನಿರುದ್ಯೋಗ, ಕೆಳ ಮಧ್ಯಮವರ್ಗಗಳ ಖರೀದಿ ಸಾಮರ್ಥ್ಯದಲ್ಲಿನ ಕುಸಿತ ಕಳವಳಕಾರಿ ವಿಚಾರ: ರಘುರಾಮ್ ರಾಜನ್

                ನವದೆಹಲಿ :ದೇಶದಲ್ಲಿ ವ್ಯಾಪಕವಾಗಿರುವ ನಿರುದ್ಯೋಗ, ಜನರಲ್ಲಿ, ಪ್ರಮುಖವಾಗಿ ಕೆಳ ಮಧ್ಯಮ ವರ್ಗಗಳಲ್ಲಿ ಖರೀದಿ ಸಾಮರ್ಥ್ಯದ ಕೊರತೆ ಇವುಗಳು ದೇಶದ ಆರ್ಥಿಕತೆಗೆ ಕಳವಳಕಾರಿ ವಿಚಾರಗಳಾಗಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

           ಭಾರತದ ಆರ್ಥಿಕತೆ ಕೆಲ ಪ್ರಕಾಶಮಾನ ಚುಕ್ಕೆಗಳನ್ನು ಹಾಗೂ ಹಲವಾರು ಕಪ್ಪು ಕಲೆಗಳನ್ನು ಹೊಂದಿದೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

ಕೋವಿಡ್ ಸಾಂಕ್ರಾಮಿಕದ ನಂತರದ ಕಾಲಘಟ್ಟದಲ್ಲಿ ದೊಡ್ಡ ಉದ್ಯಮಗಳು ಹಾಗೂ ಸಣ್ಣ ಉದ್ದಿಮೆಗಳ ನಡುವೆ ಪ್ರಗತಿ ಪ್ರಮಾಣದಲ್ಲಿ ಬಹಳಷ್ಟು ಅಂತರವನ್ನು ಸೂಚಿಸುವ `ಕೆ-ಆಕಾರದ' ಚೇತರಿಕೆಯನ್ನು ತಪ್ಪಿಸಲು ಸರಕಾರ ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದರು.

                 "ಮಧ್ಯಮ ವರ್ಗಗಳು, ಸಣ್ಣ ಮತ್ತು ಮಧ್ಯಮ ವಲಯ, ಮಕ್ಕಳ ಮನಸ್ಸುಗಳಿಗೆ ಉಂಟಾಗಬಹುದಾದ ಘಾಸಿಯೇ ನನ್ನ ದೊಡ್ಡ ಆತಂಕವಾಗಿದೆ, ಸಾಂಕ್ರಾಮಿಕದ ನಂತರ ಒಮ್ಮೆ ಬೇಡಿಕೆಗಳಲ್ಲಿ ಏರಿಕೆಯಾದರೂ ನಂತರ ಮೇಲಿನ ಸಮಸ್ಯೆ ಕಾಡಬಹುದು" ಎಂದು ಅವರು ಹೇಳಿದರು.

ದೇಶದಲ್ಲಿ ದೊಡ್ಡ ಉದ್ದಿಮೆಗಳು ಹಾಗೂ ಐಟಿ ರಂಗದ ಕಂಪೆನಿಗಳು ಉತ್ತಮ ಪ್ರಗತಿ ಸಾಧಿಸಿವೆ ಎಂದು ಅವರು ಅಭಿಪ್ರಾಯ ಪಟ್ಟರು.

           ಮುಂಬರುವ ಕೇಂದ್ರ ಬಜೆಟ್ ಕುರಿತು ಪ್ರಸ್ತಾಪಿಸಿದ ಅವರು ಮುಂದಿನ ಐದು ಅಥವಾ ಹತ್ತು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾವನೆಗಳು ಬಜೆಟಿನಲ್ಲಿರಬೇಕೆಂದು ತಾವು ಆಶಿಸುವುದಾಗಿ ತಿಳಿಸಿದರು. ಅದೇ ಸಮಯ ಭಾರತದ ಆರ್ಥಿಕತೆಯು ಕೋವಿಡ್ ಸಾಂಕ್ರಾಮಿಕಕ್ಕಿಂತ ಮುಂಚಿತವಾಗಿಯೂ ಉತ್ತಮವಾಗಿರಲಿಲ್ಲ, ಎಂದು ಅವರು ಹೇಳಿದರು.

              ಸರಕಾರಿ ಉದ್ದಿಮೆಗಳ ಒಂದು ಭಾಗ ಸಹಿತ ಸ್ವತ್ತುಗಳ ಮಾರಾಟದ ಮೂಲಕ ಖರ್ಚುವೆಚ್ಚಗಳಿಗಾಗಿ ಹೆಚ್ಚಿನ ಸಂಪನ್ಮೂಲಗಳ ಕ್ರೋಡೀಕರಣವನ್ನು ಬೆಂಬಲಿಸಿ ಮಾತನಾಡಿದ ಅವರು "ನಾವೇನು ಮಾರಾಟ ಮಾಡಬಲ್ಲೆವು ಹಾಗೂ ಈ ಮಾರಾಟಗಳಿಂದ ದೇಶದ ಆರ್ಥಿಕ ನಿರ್ವಹಣೆಯನ್ನು ಹೇಗೆ ಸುಧಾರಿಸಬಹುದೆಂಬುದಕ್ಕೆ ನಮ್ಮಲ್ಲಿ ನಿರ್ದಿಷ್ಟ ತಂತ್ರಗಾರಿಕೆಯಿರಬೇಕು, ಒಮ್ಮೆ ಮಾರಾಟ ಮಾಡಲು ನಿರ್ಧರಿಸಿದ ನಂತರ ಮುಂದಿನ ಕ್ರಮಗಳು ವೇಗವಾಗಿರಬೇಕು, ಆದರೆ ಹಾಗಾಗಿಲ್ಲ" ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries