ತಿರುವನಂತಪುರಂ: ಉದ್ದಿನ ಬೆಲೆ ಏರಿಕೆ, ನಿರ್ವಹಣಾ ವೆಚ್ಚದ ದುಬಾರಿಯ ಕಾರಣ ರಾಜ್ಯದಲ್ಲಿ ಹಪ್ಪಳದ ಬೆಲೆ ಹೆಚ್ಚಿಸಬೇಕಾಗಿದೆ ಎಂದು ಕೇರಳ ಹಪ್ಪಳ ತಯಾರಕರ ಅಸೋಸಿಯೇಶನ್ ಹೇಳಿದೆ. ಹಪ್ಪಳ ಉದ್ಯಮದ ಬಹುಪಾಲು ಸ್ವ ಉದ್ಯೋಗಿಗಳಾಗಿದ್ದು, ತಮ್ಮ ಕುಟುಂಬಗಳೊಂದಿಗೆ ಗುಡಿ ಕ್ಯೆಗಾರಿಕೆ ರೂಪದಲ್ಲಿ ತಯಾರಿಸಿ ವಿತರಿಸುತ್ತಿದ್ದಾರೆ.
ಕೇರಳದಲ್ಲಿ ಬಹುಪಾಲು ಹಪ್ಪಳ ಉದ್ದಿನ ಮೂಲಕ ತಯಾರಿಸಲಾಗುತ್ತದೆ. ಆದರೆ ಮೈದಾದಿಂದ ಹಪ್ಪಳ ತಯಾರಿಸಿ ಕಡಿಮೆ ಬೆಲೆಗೆ ಮಾರುವವರೂ ಇದ್ದಾರೆ. ಕಲಬೆರಕೆ ಹಪ್ಪಳದಲ್ಲಿ ಮೋಸ ಹೋಗದಂತೆ ಪ್ಯಾಕಿಂಗ್ ಕಮಾಡಿಟಿ ಕಾಯ್ದೆ ಪ್ರಕಾರ ಹಪ್ಪಳ ತಯಾರಿಕಾ ಹೆಸರು ಹಾಗೂ ತಯಾರಕರ ವಿಳಾಸವಿರುವ ಪ್ಯಾಕೆಟ್ ಗಳಲ್ಲಿರುವುದನ್ನು ಖರೀದಿಸುವಂತೆ ಪದಾಧಿಕಾರಿಗಳು ಮನವಿ ಮಾಡಿದರು. ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಇಂದಿನಿಂದ ಹಪ್ಪಳದ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.