ಕೊಚಿ: ಕೇರಳದ ಮೊದಲ ಹೈಪರ್ ಲೋಕಲ್ ವಿತರಣಾ ಸ್ಟಾರ್ಟ್ ಅಪ್ ಎರ್ರಾಂಡೋ ಜಗತ್ತಿನ ಮೊದಲ ವಾಟ್ಸ್ ಆಪ್ ಎಪಿಐ-ಚಾಲಿತ ವಿತರಣಾ ಸೇವೆಗಳಿಗೆ ಚಾಲನೆ ನೀಡಿದೆ.
ಗ್ರಾಹಕರು ತಮ್ಮ ವಾಟ್ಸ್ ಆಪ್ ಮೂಲಕ ಇನ್ನು ಮುಂದೆ ಆಹಾರ, ಸ್ಟೇಷನರಿ, ವೈದ್ಯಕೀಯ, ದಿನಸಿ ಸಾಮಗ್ರಿಗಳನ್ನು ತರಿಸಿಕೊಳ್ಳಬಹುದಾಗಿದೆ ಅಥವಾ ಪಿಕ್&ಡ್ರಾಪ್ ಸೇವೆಗಳನ್ನು ಪಡೆಯಬಹುದಾಗಿದೆ. 7994834834 ನಂಬರ್ ಗೆ Hello ಎಂಬ ಸಂದೇಶ ರವಾನೆ ಮಾಡುವ ಮೂಲಕ ಗ್ರಾಹಕರು ಈ ಸೇವೆಗಳನ್ನು ಪಡೆಯಬಹುದಾಗಿದೆ.
"ಆಟೋಮೆಟೆಡ್ ರಿಪ್ಲೆ ಮೆಸೇಜ್ ಗಳು ಗ್ರಾಹಕರಿಗೆ ತಮಗೆ ಬೇಕಾದ್ದನ್ನು ಆರ್ಡರ್ ಮಾಡುವ ಹಂತಗಳನ್ನು ತಿಳಿಸುತ್ತದೆ.
ವಾಟ್ಸ್ ಆಪ್ ನಲ್ಲೇ ಲೊಕೇಷನ್ ಕಳಿಸುವ ಮೂಲಕ ಪದಾರ್ಥಗಳನ್ನು ತರಿಸಿಕೊಳ್ಳಬಹುದಾಗಿದೆ" ಎನ್ನುತ್ತಾರೆ ಸಂಸ್ಥೆಯ ಸಹಸಂಸ್ಥಾಪಕ ಸಮೀರ್ ಪಥಯಕಂಡಿ. ಗ್ರಾಹಕರು ಸ್ವಯಂಚಾಲಿತವಾಗಿ ಕಳಿಸಲಾಗುವ ಪೇಮೆಂಟ್ ಲಿಂಕ್ ಗಳನ್ನು ಬಳಸಿ ಪಾವತಿ ಮಾಡುವ ಸೌಲಭ್ಯವೂ ಈ ವಿತರಣೆ ಸೇವೆಯಲ್ಲಿದೆ.
ವಾಟ್ಸ್ ಆಪ್ ಮೂಲಕ ಹಲವು ಸೇವೆಗಳನ್ನು ಪಡೆಯುವುದರಿಂದ ಒಂದಕ್ಕಿಂತ ಹೆಚ್ಚು ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದು ತಪ್ಪುತ್ತದೆ. ಸ್ಮಾರ್ಟ್ ಫೋನ್ ನಲ್ಲಿ ಜಾಗದ ಕೊರತೆ ಉಂಟಾಗುವುದಿಲ್ಲ, ಇಂಗ್ಲೀಷ್ ಹೊರತಾಗಿ, ಶೀಘ್ರವೇ ಮಲಯಾಳಂ, ಹಿಂದಿ, ತಮಿಳು, ಕನ್ನಡ ಭಾಷೆಗಳಲ್ಲಿಯೂ ಸೇವೆಗಳು ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಎರ್ರಾಂಡೋ (https://errando.co.in/) ಸೇವೆಗೆಳು ಸದ್ಯಕ್ಕೆ ಕೊಚಿ, ಕೋಯಿಕ್ಕೋಡ್, ತಿರುವನಂತಪುರಂ, ಬೆಂಗಳೂರುಗಳಲ್ಲಿಯೂ ಲಭ್ಯವಿದೆ. ಪ್ರತಿ ತಿಂಗಳು 1.5 ಲಕ್ಷ ಆರ್ಡರ್ ಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಶಮೀರ್ ಹೇಳಿದ್ದಾರೆ.