ಮಧೂರು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವಿಂಶತಿ ವರ್ಷದ ಅಂಗವಾಗಿ ಕೊಡಮಾಡುವ ಭರವಸೆಯ ಬೆಳಕು ಪ್ರಥಮ ಬಾಲಪ್ರತಿಭಾ ಪುರಸ್ಕಾರವನ್ನು ಬಹುಮುಖ ಪ್ರತಿಭೆಯ ಕಲಾವಿದ, ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಆದ್ಯಂತ್ ಅಡೂರು ಅವರಿಗೆ ಪ್ರದಾನ ಮಾಡಲಾಯಿತು.
ಕನ್ನಡ ಭವನದ ಸ್ಥಾಪಕ ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ದಂಪತಿ ಅವರು ಆದ್ಯಂತ್ ಅಡೂರು ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ, ಭರವಸೆಯ ಬೆಳಕು ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಕವಿ, ವ್ಯಂಗ್ಯ ಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು, ಹಿರಿಯ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ, ಹಿರಿಯ ಸಾಹಿತಿಗಳಾದ ವೈ.ಸತ್ಯನಾರಾಯಣ, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ನರಸಿಂಹ ಭಟ್ ಯೇತಡ್ಕ, ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪೆÇ್ರ.ಎ.ಶ್ರೀನಾಥ್ ಕಾಸರಗೋಡು, ಸುಂದರ ಬಾರಡ್ಕ, ಗಿರೀಶ್ ಪಿ.ಎಂ.ಚಿತ್ತಾರಿ, ವಿಶಾಲಾಕ್ಷ ಪುತ್ರಕಳ, ರೇಖಾ ರೋಶನ್, ಉಷಾ ಟೀಚರ್ ಚಿತ್ತಾರಿ, ಬಾಲಕೃಷ್ಣ ಬೇರಿಕೆ, ವಿರಾಜ್ ಅಡೂರು, ದೇವರಾಜ್ ಆಚಾರ್ಯ, ವಿದ್ಯಾಗಣೇಶ್ ಅಣಂಗೂರು, ಅಖಿಲೇಶ್, ವಿರಾಜ್ ಅಡೂರು, ಪತ್ರಕರ್ತರಾದ ವೀಜಿ ಕಾಸರಗೋಡು, ಪ್ರದೀಪ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.