ಮಧೂರು: :ಡಯಟ್ ಮಾಯಿಪ್ಪಾಡಿ ಇದರ ಆಶ್ರಯದಲ್ಲಿ ರಂಗ ಚೇತನ ಕಾಸರಗೋಡು ಇದರ ನೇತೃತ್ವದಲ್ಲಿ ಕಾಸರಗೋಡು ಮಾಯಿಪ್ಪಾಡಿಯ ಅಧ್ಯಾಪಕ ವಿಧ್ಯಾರ್ಥಿಗಳಿಗೆ ಒಂದು ದಿನದ "ಲೈಟ್ ಕ್ಯಾಮರಾ ಆಕ್ಷನ್ " ಎಂಬ ವಿಶಿಷ್ಟವಾದ ತರಬೇತಿ ಶಿಬಿರ ಜರಗಿತು. ಕಾರ್ಯಕ್ರಮವನ್ನು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ,ಸಂಸ್ಥೆಯ ಗೌರವಾದ್ಯಕ್ಷ ಯತೀಶ್ ಕುಮಾರ್ರೈ ಉದ್ಘಾಟಿಸಿ ಮಾತನಾಡಿ,"ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರಗೆಡಹಲು ಸೂಕ್ತ ಸನ್ನಿವೇಶವನ್ನು ಸೃಷ್ಟಿಸಿ ಬೆಳೆಸಬೇಕಾದ್ದು ನಮ್ಮ ಕರ್ತವ್ಯ.ಈ ನಿಟ್ಟಿನಲ್ಲಿ ನಮ್ಮ ಕಲಿಕೆ ಜರಗಬೇಕು. ಕಲಾಸಕ್ತ ಅಧ್ಯಾಪಕರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿದೆ" ಎಂದು ತಿಳಿಸಿದರು.
ರಂಗ ಚೇತನ ಕಾಸರಗೋಡು ಇದರ ಅಧ್ಯಕ್ಷ ಬಾಲಕೃಷ್ಣ ಅಡೂರು ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಡಯಟ್ ಪ್ರಾಧ್ಯಾಪಕರಾದ ಶಶಿಧರ ಕಾಸರಗೋಡು, ಸದಾಶಿವ ಕಳತ್ತೂರು,ಮೆಲ್ವಿನ್ ಪೆರ್ಮುದೆ ಉಪಸ್ಥಿತರಿದ್ದರು. ಶಿಬಿರದಲ್ಲಿ ಸಿನಿಮಾದಲ್ಲಿ ಲೈಟ್,ಕ್ಯಾಮರಾ ಹಾಗೂ ಆಕ್ಷನ್ ಹೇಗಿರಬೇಕು ಎಂಬ ಮಾಹಿತಿಯನ್ನು ನೀಡಲಾಯಿತು. ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಡಯಟ್ ಪ್ರಾಧ್ಯಾಪಕ ಅಶೋಕ್ ಸ್ವಾಗತಿಸಿ, ರಂಗ ಚೇತನ ಕಾಸರಗೋಡು ಇದರ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿದರು.