ನವದೆಹಲಿ: ದೇಶಾದ್ಯಂತ ಕೊರೊನಾ ಪ್ರಕರಣಗಳು ಮತ್ತೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ರಾಲಿಗಳನ್ನು ರದ್ದು ಪಡಿಸಿ ಆನ್ ಲೈನ್ ಚುನಾವಣಾ ಪ್ರಚಾರ ಮಾರ್ಗಗಳತ್ತ ಕಾಂಗ್ರೆಸ್ ಮುಖ ಮಾಡಿದೆ.
ಫೇಸ್ ಬುಕ್, ಇನ್ ಸ್ಟಾಗ್ರಂ ಹಾಗೂ ಮತ್ತಿತರ ಸಾಮಾಜಿಕ ಜಾಲತಾಣಗಳನ್ನು ಕೇಂದ್ರೀಕರಿಸಿ ಪ್ರಚಾರ ಕಾರ್ಯಗಳಲ್ಲಿ ತೊಡಗಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ಚುನಾವಣಾಗ್ರಸ್ಥ ರಾಜ್ಯಗಳಲ್ಲಿ ಸಾರ್ವಜನಿಕ ಪ್ರಚಾರ ರಾಲಿಗಳನ್ನು ಪಕ್ಷ ಈ ಹಿಂದೆ ರದ್ದುಪಡಿಸಿತ್ತು. ಡಿಜಿಟಲ್ ಚುನಾವಣಾ ಪ್ರಚಾರ ಕಣ ಸಿದ್ಧಗೊಳ್ಳುತ್ತಿದೆ ಎನ್ನುವುದು ಇದರಿಂದ ಸ್ಪಷ್ತ. ಇತ್ತೀಚಿಗಷ್ಟೆ ಉತ್ತ್ರರಪ್ರದೇಶ ಮತದಾರರ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಂವಾದ ನಡೆಸಿದ್ದರು.
ಚುನಾವಣಾ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಬೇಕು ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಆದೇಶಿಸಿರುವುದಾಗಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.