ಕೊಚ್ಚಿ: ಪೋಲೀಸರಿಗೂ ನಿಯಂತ್ರಿಸಲು ಸಾಧ್ಯವಾಗದ ಘರ್ಷಣೆಯಲ್ಲಿ ಎಸ್‍ಎಫ್‍ಐ ಕಾರ್ಯಕರ್ತ ಸಾವನ್ನಪ್ಪಿದ್ದು, ಈ ನಿಟ್ಟಿನಲ್ಲಿ ಎಸ್‍ಎಫ್‍ಐ ಮತ್ತು ಡಿವೈಎಫ್‍ಐ ಕಾರ್ಯಕರ್ತರು ರಾಜ್ಯಾದ್ಯಂತ ಹಿಂಸಾಚಾರಕ್ಕೆ ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಉಮ್ಮನ್ ಚಾಂಡಿ ಫೇಸ್‍ಬುಕ್ ಪೋಸ್ಟ್‍ನಲ್ಲಿ ಆರೋಪಿಸಿದ್ದಾರೆ.
ಧೀರಜ್ ಹತ್ಯೆ ಅತ್ಯಂತ ದುರದೃಷ್ಟಕರ ಎಂದು ಸ್ಪಷ್ಟಪಡಿಸಿದ ಉಮ್ಮನ್ ಚಾಂಡಿ ಹತ್ಯೆಯನ್ನು ಕಟು ಶಬ್ದಗಳಿಂದ ಖಂಡಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಿಂಸಾಚಾರಕ್ಕೆ ಎಸ್‍ಎಫ್‍ಐ ಮತ್ತು ಡಿವೈಎಫ್‍ಐ ಕಾರ್ಯಕರ್ತರು ನಡೆಸುತ್ತಿರುವ ಪ್ರಯತ್ನಗಳು ಹಾಗೂ ಮಹಾರಾಜ ಕಾಲೇಜು ಸೇರಿದಂತೆ ಹಲವು ಕ್ಯಾಂಪಸ್‍ಗಳಲ್ಲಿ ನಡೆದ ಘರ್ಷಣೆಗಳು ದಿಗಿಲು ಹುಟ್ಟಿಸಿದೆ. ಹಿಂಸಾಚಾರವನ್ನು ನಿಯಂತ್ರಿಸುವ ಜವಾಬ್ದಾರಿ ಸರ್ಕಾರ ಮತ್ತು ಮಾರ್ಕಿಸ್ಟ್ ಪಕ್ಷದ ಮೇಲಿದೆ ಎಂದು ಉಮ್ಮನ್ ಚಾಂಡಿ ಹೇಳಿದರು. ಪಾಲಕ್ಕಾಡ್ ಡಿಸಿಸಿ ಕಚೇರಿಯ ಮೇಲಿನ ದಾಳಿ ಹಿಂಸಾಚಾರವನ್ನು ಹರಡುವ ಉದ್ದೇಶಪೂರ್ವಕ ಕ್ರಮದ ಭಾಗವಾಗಿದೆ ಎಂದವರು ತಿಳಿಸಿರುವರು.