HEALTH TIPS

dnp ತಮಿಳುನಾಡು: ಮುಚ್ಚಿದ ದೇಗುಲದ ಎದುರೇ ವಿವಾಹ ಬಂಧನಕ್ಕೆ ಒಳಗಾದ 91 ಜೋಡಿ!

                 ಕಡಲೂರು: ಕೋವಿಡ್ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನ್‌ ನಡುವೆಯೂ ಇಲ್ಲಿನ ತಿರುವಂತಿಪುರಂ ಶ್ರೀ ದೇವನಾಥಸ್ವಾಮಿ ದೇಗುಲದ ಹೊರಗೆ 91 ಜೋಡಿ ಭಾನುವಾರ ದಾಂಪತ್ಯ ಬದುಕಿಗೆ ಕಾಲಿಟ್ಟವು. ತಮಿಳು ಸಂಪ್ರದಾಯದಂತೆ ಈ ತಿಂಗಳು (ತಾಯ್‌) ಶುಭಕರ ಮಾಸವಾಗಿದೆ.

              ನವಜೋಡಿಗಳಿಗೆ ಅರ್ಚಕರು ದೇಗುಲದ ಹೊರಗಿನ ರಸ್ತೆಯಲ್ಲಿಯೇ ವಿವಾಹ ನಡೆಸಿಕೊಟ್ಟರು ಎಂದು ದೇಗುಲದ ಆಡಳಿತ ಮಂಡಳಿ ಅಧಿಕಾರಿ ಎ.ವೀರಬತೀರನ್‌ ಮತ್ತು ಕಾರ್ಯದರ್ಶಿ ರತೀನಾ ಸಭಾಪತಿ ಅವರು ತಿಳಿಸಿದರು.

            ಶುಭ ಮುಹೂರ್ತವಿದ್ದ ಕಾರಣ 110 ಜೋಡಿ ಮದುವೆಗೆ ನೋಂದಣಿ ಮಾಡಿಸಿದ್ದರು. ಬೆಳಿಗ್ಗೆ 4.30ರಿಂದ 11ರ ನಡುವಿನ ಅವಧಿಯಲ್ಲಿ ವಿವಾಹ ನೆರವೇರಿತು. ವಿಷ್ಣುವಿನ ಈ ದೇವಸ್ಥಾನದಲ್ಲಿ ಮದುವೆಯಾದರೆ ಒಳ್ಳೆಯದು ಎಂಬ ನಂಬಿಕೆಯಿದೆ. ವಿವಿಧ ಭಾಗಗಳ ಜನರು ಬಂದು ಇಲ್ಲಿ ಮದುವೆಯಾಗುತ್ತಾರೆ.

        ದೇಗುಲದ ಸಭಾಂಗಣದಲ್ಲಿ ಒಟ್ಟಿಗೆ 40 ಜೋಡಿ ವಿವಾಹವಾಗಲು ಅವಕಾಶವಿದೆ. ದೇಗುಲ ತೆರೆದಿರುವ ಸಾಮಾನ್ಯ ದಿನಗಳಲ್ಲಿ ಮದುವೆಯಾಗುವ ಜೋಡಿಗಳಿಗೆ ಯಾವುದೇ ಮಿತಿ ಇಲ್ಲ.

         ತಮಿಳುನಾಡಿನಲ್ಲಿ ಹೊಸದಾಗಿ 30,850 ಪ್ರಕರಣ ದೃಢಪಟ್ಟಿವೆ. ನಿಯಂತ್ರಣ ಕ್ರಮವಾಗಿ ಸರ್ಕಾರ ವಾರಾಂತ್ಯ ಲಾಕ್‌ಡೌನ್‌ ಅನ್ನು ಜಾರಿಗೊಳಿಸಿದೆ. ಹೀಗಾಗಿ ಭಾನುವಾರ ದೇಗುಲವನ್ನು ಬಂದ್ ಮಾಡಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries