ಶಬರಿಮಲೆ: ಮಕರಸಂಕ್ರಮಣದ ದಿನವಾದ ಇಂದು ಪೆÇನ್ನಂಬಲ ಬೆಟ್ಟದಲ್ಲಿ ಅಸಂಖ್ಯ ಅಯ್ಯಪ್ಪ ವ್ರತಧಾರಿಗಳು ಮಕರ ಜ್ಯೋತಿ ವೀಕ್ಷಿಸಿ ಪಾವನರಾದರು. ಪೆÇನ್ನಂಬಲ ಬೆಟ್ಟದಲ್ಲಿ ವಾಡಿಕೆಯಂತೆ ಜ್ಯೋತಿ ಬೆಳಗಿತು. ಸನ್ನಿಧಾನಕ್ಕೆ ತರಲಾದ ತಿರುವಾಭರಣದೊಂದಿಗೆ ಅಯ್ಯಪ್ಪಸ್ವಾಮಿಗೆ ದೀಪಾರಾಧನೆ ನಡೆಯುತ್ತಿರುವಂತೆ ಮಕರ ಬೆಳಕು ಕಂಡುಬಂತು. ಪೆÇನ್ನಂಬಲ ಬೆಟ್ಟದತ್ತ ಕೈಮುಗಿದು ಜಯಘೋಷ ಕೂಗಿದರು. ಆಕಾಶದಲ್ಲಿ ಮಕರ ನಕ್ಷತ್ರ ಬೆಳಗುತ್ತಿದ್ದರೆ, ಪೂರ್ಣಚಂದ್ರ ದಿಗಂತದಲ್ಲಿ ಪ್ರಖರವಾಗಿ ಬೆಳಗುತ್ತಿದ್ದನು.
ಬೆಳಗ್ಗಿನಿಂದಲೇ ಸಾವಿರಾರು ಭಕ್ತಜನರು ಕಾಯುತ್ತಿದ್ದ ಕ್ಷಣ ಭಕ್ತಿಪೂರ್ವಕವಾಗಿ ಮುಕ್ತಾಯವಾಯಿತು. ಎರಡು ವರ್ಷಗಳಿಂದ ಶಬರಿಮಲೆಗೆ ಭೇಟಿ ನೀಡಲು ಸಾಧ್ಯವಾಗದ ಲಕ್ಷಾಂತರ ಅಯ್ಯಪ್ಪ ಭಕ್ತರಿಗೆ ಮಕರ ಬೆಳಕು ದರ್ಶನ ಸಾರ್ಥಕವಾಯಿತು.
ತಿರುವಾಭರಣ ಮೆರವಣಿಗೆ ಶಬರಿಪೇಟೆ ಮತ್ತು ಸಾರಂಕುತ್ತಿ ಮೂಲಕ ಸನ್ನಿಧಾನ ತಲುಪಿತು. ಪಂದಳ ರಾಜನ ಮಗ ಮಣಿಕಂಠ ಕುಮಾರ ಅವರು ವಿಧಿವತ್ತಾದ ಆಭರಣಗಳು, ಧ್ವಜ, ಆಯುಧಗಳು ಮತ್ತು ಬಟ್ಟಲುಗಳನ್ನು ಒಳಗೊಂಡ ಮೂರು ಪೆಟ್ಟಿಗೆಗಳು ಸಂಜೆ 6.30 ಕ್ಕೆ ಗರ್ಭಗುಡಿಯನ್ನು ತಲುಪಿದವು. ಮಕರ ಬೆಳಕು ದರ್ಶನದ ವೇಳೆ ಭದ್ರತೆಗಾಗಿ ಸುಮಾರು 2,000 ಪೋಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಭಕ್ತರು ತಿರುವಾಭರಣ ಮೆರವಣಿಗೆಯನ್ನು ಪ್ರವೇಶಿಸಿ 18ನೇ ಮೆಟ್ಟಿಲು ತಲುಪುತ್ತಿದ್ದಂತೆ ಕರ್ಪೂರ ಪ್ರಾರ್ಥನೆಯನ್ನು ಸ್ವೀಕರಿಸಿದರು. ನಂತರ ಧ್ವಜ ಪೆಟ್ಟಿಗೆ ಮತ್ತು ಬಟ್ಟಲನ್ನು ಛಾವಣಿಗೆ ತರಲಾಯಿತು. ಇದೇ ವೇಳೆಗೆ ತಿರುವಾಭರಣ ಪೆಟ್ಟಿಗೆ 18ನೇ ಮೆಟ್ಟಿಲು ಹತ್ತಿ ದೇಗುಲದ ಮುಂಭಾಗಕ್ಕೆ ತಂದರು. ಸಂಜೆ 6.40ಕ್ಕೆ ತಂತ್ರಿ ಹಾಗೂ ಮೇಲ್ಶಾಂತಿ ತಿರುವಾಭರಣ ಸ್ವೀಕರಿಸಿದರು. 6.50ಕ್ಕೆ ದೀಪಾರಾಧನೆ, ಶರಣಂ ಘೋಷ ಮುಗಿಲುಮುಟ್ಟಿತು. ಪೊನ್ನಂಬಲ ಬೆಟ್ಟದಲ್ಲಿ ಸಕಾಲದಲ್ಲಿ ಮೂರು ಬಾರಿ ಮಕರ ಜ್ಯೋತಿ ಬೆಳಗಿ ಭಕ್ತರು ಮಕರ ಜ್ಯೋತಿ ದರ್ಶನ ಪಡೆದು ಪುನೀತರಾದರು.