HEALTH TIPS

Pegasus row: 2017ರ ಭಾರತ-ಇಸ್ರೇಲ್ ನಡುವಣ ರಕ್ಷಣಾ ಒಪ್ಪಂದದ ಕೇಂದ್ರಬಿಂದು ಪೆಗಾಸಸ್ ಸ್ಪೈವೇರ್; ನ್ಯೂಯಾರ್ಕ್ ಟೈಮ್ಸ್ ವರದಿ

              ನ್ಯೂಯಾರ್ಕ್: ಬೇಹುಗಾರಿಕೆ ಇಸ್ರೇಲ್ ಸಾಫ್ಟ್ ವೇರ್ ಪೆಗಾಸಸ್(Israeli spyware Pegasus ) ಮತ್ತು ಕ್ಷಿಪಣಿ ವ್ಯವಸ್ಥೆಯು 2017ರ ಭಾರತ-ಇಸ್ರೇಲ್ ನಡುವಿನ ರಕ್ಷಣಾ ಒಪ್ಪಂದದ ಕೇಂದ್ರಬಿಂದುವಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್(The New York Times) ವರದಿ ಮಾಡಿದೆ.

       2017ರಲ್ಲಿ ಭಾರತ ಮತ್ತು ಇಸ್ರೇಲ್ ಮಧ್ಯೆ ಸುಮಾರು 2 ಬಿಲಿಯನ್ ಒಪ್ಪಂದವಾಗಿದ್ದು ಅದು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳಿಗೆ ಸಂಬಂಧಿಸಿದ್ದಾಗಿದ್ದವು. ಅದರ ಕೇಂದ್ರಬಿಂದು ಇಸ್ರೇಲ್ ನ ಬೇಹುಗಾರಿಕೆ ಸಾಫ್ಟ್ ವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆ ಎಂದು ಪ್ರಸಿದ್ಧ ಇಂಗ್ಲಿಷ್ ದೈನಿಕ ನ್ಯೂಯಾರ್ಕ್ ಟೈಮ್ಸ್ ನ ವರದಿ ಹೇಳುತ್ತದೆ.

               ಕಳೆದ ವರ್ಷ ಪೆಗಾಸಸ್ ಭಾರೀ ಸುದ್ದಿ ಮಾಡಿತ್ತು. ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕುಗಳ ರಕ್ಷಕರು, ರಾಜಕಾರಣಿಗಳು ಮತ್ತು ಇತರರ ಮೇಲೆ ಕಣ್ಣಿಡಲು ಸರ್ಕಾರಗಳು ತನ್ನ ಪೆಗಾಸಸ್ ಸಾಫ್ಟ್‌ವೇರ್ ಅನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಭಾರತದ 17 ಮಾಧ್ಯಮ ಸಂಸ್ಥೆಗಳ 40ಕ್ಕೂ ಹೆಚ್ಚು ಪತ್ರಕರ್ತರು, ಮಾನವ ಹಕ್ಕು ಕಾರ್ಯಕರ್ತರು, ಕೆಲವು ಉದ್ಯಮಿಗಳು ಹಾಗೂ ರಾಜಕಾರಣಿಗಳ ಫೋನ್ ಗಳ ಮೇಲೆ ಪೆಗಾಸಸ್ ಬೇಹುಗಾರಿಕೆ ಸಾಫ್ಟ್ ವೇರ್ ಮೂಲಕ ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದ್ದು ಭಾರೀ ಅಲ್ಲೋಲ ಕಲ್ಲೋಲ ಎಬ್ಬಿಸಿತ್ತು. ಆದರೆ ಈ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕುತ್ತಾ ಬರುತ್ತಿದೆ.ಇದು ಗೌಪ್ಯತೆ, ಖಾಸಗಿತನದ ಬಗ್ಗೆ ಸಂದೇಹವನ್ನು ಹುಟ್ಟುಹಾಕಿತ್ತು.

               ಪತ್ರಿಕೆಯ ವರದಿಯಲ್ಲಿ ಏನಿದೆ?: ನ್ಯೂಯಾರ್ಕ್ ಟೈಮ್ಸ್ ನ 'The Battle for the World's Most Powerful Cyberweapon' ತಲೆಬರಹದಡಿ ವರದಿಯೊಂದು ಪ್ರಕಟವಾಗಿದೆ. ಇಸ್ರೇಲಿ ಸಂಸ್ಥೆಯಾದ NSO ಗ್ರೂಪ್ ಸುಮಾರು ಒಂದು ದಶಕದಿಂದ ತನ್ನ ಗುಪ್ತಚರ ಸಾಫ್ಟ್‌ವೇರ್ ಅನ್ನು ಚಂದಾದಾರಿಕೆಯ ಆಧಾರದ ಮೇಲೆ ಕಾನೂನು ಜಾರಿ ಮತ್ತು ಪ್ರಪಂಚದಾದ್ಯಂತದ ಗುಪ್ತಚರ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ, ಸ್ಥಿರವಾಗಿ ಮತ್ತು ವಿಶ್ವಾಸಾರ್ಹವಾಗಿ ಯಾವುದೇ iPhone ಅಥವಾ Android ಸ್ಮಾರ್ಟ್‌ಫೋನ್‌ನ ಎನ್‌ಕ್ರಿಪ್ಟ್ ಮಾಡಲಾದ ಸಂವಹನಗಳನ್ನು ಭೇದಿಸುವ, ಪ್ರಪಂಚದಾದ್ಯಂತ ಯಾರೂ ಮಾಡಲಾರದ ಖಾಸಗಿ ಕಂಪೆನಿಗಳು ಮತ್ತು ಸರ್ಕಾರಿ ಸಂಸ್ಥೆಗಳು ಮಾಡಲು ಸಾಧ್ಯವಿಲ್ಲದ ಕೆಲಸಗಳನ್ನು ಮಾಡಬಹುದು ಎಂದು ಭರವಸೆ ನೀಡಿ ಈ ರೀತಿ ಹ್ಯಾಕ್ ಮಾಡುವ ಕೆಲಸಕ್ಕೆ ಇಸ್ರೇಲ್ ಸರ್ಕಾರ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ.

               ವರದಿಯಲ್ಲಿ ಇನ್ನೂ ಕೆಲವು ಅಂಶಗಳು ಹೀಗಿವೆ: ಪ್ರಧಾನಿ ನರೇಂದ್ರ ಮೋದಿ 2017ರ ಜುಲೈಯಲ್ಲಿ ಇಸ್ರೇಲ್ ಗೆ ಭೇಟಿ ನೀಡಿದ್ದರು. ಇಸ್ರೇಲ್ ಗೆ ಭೇಟಿ ಕೊಟ್ಟ ಮೊದಲ ಭಾರತದ ಪ್ರಧಾನಿಯಾಗಿ. ಭಾರತವು ದಶಕಗಳ ಕಾಲ ಇಸ್ರೇಲ್ ಜೊತೆಗೆ ಪ್ಯಾಲೆಸ್ಟೀನಿಯನ್ ಕಾರಣಕ್ಕೆ ಬದ್ಧತೆ ನೀತಿಯನ್ನು ಉಳಿಸಿಕೊಂಡಿದೆ. ಭಾರತ-ಇಸ್ರೇಲ್ ಸೌಹಾರ್ದಯುತ ಸಂಬಂಧ ಇರಿಸಿಕೊಂಡು ಬಂದಿದೆ. ಅಂದು ಪ್ರಧಾನಿ ಮೋದಿ ಮತ್ತು ಅಂದಿನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಮುದ್ರ ತೀರದಲ್ಲಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗಿದ್ದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಗಮನ ಸೆಳೆದಿತ್ತು. ಇವರಿಬ್ಬರ ಈ ಸಾಮೀಪ್ಯಕ್ಕೆ ಬಲವಾದ ಕಾರಣವಿತ್ತು.

  ಅದುವೇ ಈ ಪೆಗಾಸಸ್. ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸರಿಸುಮಾರು 2 ಬಿಲಿಯನ್ ಡಾಲರ್ ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಮಾರಾಟಕ್ಕೆ ಇಬ್ಬರೂ ಒಪ್ಪಂದಕ್ಕೆ ಬಂದಿದ್ದರು. ಅದಾದ ಬಳಿಕ ಕೆಲವು ತಿಂಗಳುಗಳು ಕಳೆದು ನೆತನ್ಯಾಹು ಕೂಡ ಭಾರತಕ್ಕೆ ಭೇಟಿ ಕೊಟ್ಟರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries