ರೆಸ್ಯೂಲೇಷನ್ ಮಾಡಿದ್ದೇವೆಯೆಂದು ಇನ್ನು ವರ್ಷಪೂರ್ತಿ ಡಯಟ್ ಮಾಡಲು ಸಾಧ್ಯವೇ? ಪಾರ್ಟಿ ಫಂಕ್ಷನ್‌ಗಳಿಗೆ ಹೋದಾಗ ಇಷ್ಟದ ಆಹಾರಗಳನ್ನು ಸವಿಯದೆ ಬಂದರೆ ಮನಸ್ಸಿಗೆ ತೃಪ್ತಿ ಅನಿಸುವುದೇ? ಖಂಡಿತ ಇಲ್ಲ ಅಲ್ವಾ? ನಿಮ್ಮ ರೆಸ್ಯೂಲೇಷನ್ ಹಾಳಾಗಬಾರದು, ಅಪರೂಪಕ್ಕೆ ಇಷ್ಟದ ಭಕ್ಷ್ಯವನ್ನು ಸೇವಿಸಬೇಕು ಆದರೆ ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರ ಬಾರದೆಂದರೆ ಈ ಡಿಟಾಕ್ಸ್ ಡ್ರಿಂಕ್ಸ್ ಸಹಕಾರಿ ನೋಡಿ:
ಆಮ್ಲ ಜ್ಯೂಸ್: ಆಮ್ಲ ಜ್ಯೂಸ್ ಚಯಪಚಯ ಕ್ರಿಯೆ ಉತ್ತಮವಾಗಿಸುತ್ತೆ, ಇದು ಕೊಬ್ಬು ಕರಗಿಸುತ್ತೆ, ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು. 20ml ನೆಲ್ಲಿಕಾಯಿ ರಸವನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಲೆಮನ್ ಟೀ: ತುಸು ಆಹಾರ ಜಾಸ್ತಿ ಸವಿದಾಗ ಲೆಮನ್ ಟೀ ಕುಡಿಯಿರಿ. ಬ್ಯಾಕ್ ಟೀ ತಯಾರಿಸಿ ಅದಕ್ಕೆ ಲೆಮನ್ ಹಾಕಿ ಸವಿಯಿರಿ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ ಹಾಗೂ ದೇಹವನ್ನು ಡಿಟಾಕ್ಸ್ ಮಾಡುವುದು.
ಜೇನು, ನಿಂಬೆರಸ, ಶುಂಠಿ ಟೀ ಶುಂಠಿ ಹಾಕಿ ಕುದಿಸಿದ ನೀರಿಗೆ ಸ್ವಲ್ಪ ನಿಂಬೆರಸ ಮತ್ತು ಜೇನು ಹಾಕಿ ಸವಿದರೆ ದೇಹವನ್ನು ಡಿಟಾಕ್ಸ್ ಮಾಡುವುದು. ಇದನ್ನು ನೀವು ಪಾರ್ಟಿ, ಫಂಕ್ಷನ್‌ಗಳ ಊಟ ಸವಿದ ಬಳಿಕ ಮಾಡಿ ಕುಡಿದರೆ ದೇಹದ ಕೊಬ್ಬು ಹೆಚ್ಚುವುದಿಲ್ಲ.
ಜೇನು, ನಿಂಬೆರಸ, ಶುಂಠಿ ಟೀ ಶುಂಠಿ ಹಾಕಿ ಕುದಿಸಿದ ನೀರಿಗೆ ಸ್ವಲ್ಪ ನಿಂಬೆರಸ ಮತ್ತು ಜೇನು ಹಾಕಿ ಸವಿದರೆ ದೇಹವನ್ನು ಡಿಟಾಕ್ಸ್ ಮಾಡುವುದು. ಇದನ್ನು ನೀವು ಪಾರ್ಟಿ, ಫಂಕ್ಷನ್‌ಗಳ ಊಟ ಸವಿದ ಬಳಿಕ ಮಾಡಿ ಕುಡಿದರೆ ದೇಹದ ಕೊಬ್ಬು ಹೆಚ್ಚುವುದಿಲ್ಲ.
ಅರಿಶಿಣ, ಜೇನು, ಕಾಳು ಮೆಣಸು ಯಾವುದೋ ಪಾರ್ಟಿ ಇದೆ ಎಂದಾದರೆ ಒಂದು ಲೋಟ ನೀರನ್ನು ಕುದಿಸಿ, ಅದಕ್ಕೆ ಸ್ವಲ್ಪ ಅರಿಶಿಣ, 1/4 ಚಮಚ ಅರಿಶಿಣ ಪುಡಿ, ಸ್ವಲ್ಪ ಕಾಳು ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ. ನಂತರ ಪಾರ್ಟಿ ಆಹಾರ ಸವಿಯಿರಿ.
ಪಾಲಾಕ್ ಮತ್ತು ಸೇಬು ಜ್ಯೂಸ್ ಪಾಲಾಕ್ ಹಾಗೂ ಸೇಬು ಹಾಕಿ ಜ್ಯೂಸ್ ಮಾಡಿ ಅದಕ್ಕೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ತುಂಬಾನೇ ಒಳ್ಳೆಯದು. ಇದನ್ನು ಪ್ರತಿದಿನ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ನೀವು ಯಾವ ಸಮಯದಲ್ಲಿ ಬೇಕಾದರೂ ತೆಗೆದುಕೊಳ್ಳಬಹುದು.
ಪಿಂಕ್ ಸಾಲ್ಟ್ -ಜಿಂಜರ್ ಡಿಟಾಕ್ಸ್ ಡ್ರಿಂಕ್ಸ್ ಇದನ್ನು ಮಾಡುವುದು ತುಂಬಾ ಸುಲಭ, ಶುಂಠಿಯನ್ನು ತುರಿದು ಬೇಯಿಸಿ,ಅದಕ್ಕೆ ಸ್ವಲ್ಪ ಪಿಂಕ್ ಸಾಲ್ಟ್ ಹಾಗೂ ಜೇನು ಸೇರಿಸಿ ಕುಡಿಯಿರಿ. ಇದು ಕೂಡ ದೇಹವನ್ನು ಡಿಟಾಕ್ಸ್ ಮಾಡುವುದು. ಸಲಹೆ: ನೀವು ನಿಮಗೆ ಇಷ್ಟವಾದ ಆಹಾರವನ್ನು ಅಪರೂಪಕ್ಕೆ ತಿಂದರೆ ಅದರಿಂದ ಮೈ ತೂಕ ಹೆಚ್ಚುವುದಿಲ್ಲ. ಆದರೆ ದಿನಾ ಅಥವಾ ವಾರದಲ್ಲಿ 3-4 ಬಾರಿ ಅಂಥ ಆಹಾರಶೈಲಿ ಮೈ ತೂಕ ಹೆಚ್ಚಿಸುವುದು, ಆರೋಗ್ಯವನ್ನು ಹಾಳು ಮಾಡುವುದು. ನಿಮ್ಮ ಆರೋಗ್ಯಕರ ಆಹಾರಶೈಲಿಯಲ್ಲಿ ಈ ಡಿಟಾಕ್ಸ್ ಪಾನೀಯ ಸೇರಿಸಿದರೆ ಆರೋಗ್ಯಕರ ಮೈ ತೂಕ ಹೊಂದಬಹುದು, ಆರೋಗ್ಯ ಹೆಚ್ಚಿಸಿಕೊಳ್ಳಬಹುದು. ಆದರೆ ನೆನಪಿಡಿ ಇವುಗಲನ್ನು ದಿನದಲ್ಲಿ ಒಂದು ಲೋಟವಷ್ಟೇ ಸೇವಿಸಿ. ಇನ್ನು ಏನಾದರೂ ಆರೋಗ್ಯ ಸಮಸ್ಯೆಯಿದ್ದು ಔಷಧಿ ತೆಗೆದುಕೊಳ್ಳುತ್ತಿದ್ದರೆ ವೈದ್ಯರ ಸಲಹೆ ಪಡೆಯಿರಿ.