HEALTH TIPS

WhatsApp: ನಿಮ್ಮ ಕುರಿತು ಏನು ಮಾತಾಡಿಕೊಳ್ಳುತ್ತಾರೆ ಎಂಬ ಕೌತುಕವೇ? ವಾಟ್ಸ್‌ಆಯಪ್‌ ಪ್ರೊಫೈಲ್ ನೀಡುತ್ತೆ ಆ ಮಾಹಿತಿ..!

           ನಮ್ಮ ಕುರಿತು ನಮ್ಮ ಕುಟುಂಬದ ಸದಸ್ಯರು (Family Members), ಗೆಳೆಯರು (Friends) ಏನೆಲ್ಲ ಮಾತನಾಡುತ್ತಾರೆ ಎಂಬ ಕೌತುಕ ಯಾರಿಗೆ ತಾನೆ ಇರುವುದಿಲ್ಲ..? ನಿಮ್ಮ ಕುರಿತು ಯಾರೆಲ್ಲ ಏನೇನು ಮಾತನಾಡುತ್ತಾರೆ ಎಂಬ ಮಾಹಿತಿಯ ಸಂಪರ್ಕದಲ್ಲಿರುವುದು ನಿಜಕ್ಕೂ ಒಳ್ಳೆಯದೆ!

           ಆ ಮಾಹಿತಿಯನ್ನು ನೀವು ಒಂದು ಅಧಿಸೂಚನೆ ಮೂಲಕ ಪಡೆಯಬಹುದಾದರೆ ಅದಕ್ಕಿಂತ ಉತ್ತಮ ಮತ್ತೊಂದೇನಿದೆ? ಇಂತಹ ಮಾಹಿತಿಯನ್ನು ಹಂಚುವ ವಾಟ್ಸ್‌ಆಯಪ್‌ ಟ್ರಿಕ್ (WhatsApp Trick) ಶೀಘ್ರದಲ್ಲೇ ಪರಿಚಯವಾಗುವ ಸಾಧ್ಯತೆ ಇದೆ.

            ಈ ಸಂದೇಶ ತಂತ್ರಾಂಶವು ಹೊಸ ಬಗೆಯ ವೈಶಿಷ್ಟ್ಯವನ್ನು ಪರಿಚಯಿಸುವ ಪ್ರಯತ್ನದಲ್ಲಿದ್ದು, ನಿಮ್ಮ ಕುರಿತು ನಿಮ್ಮ ಕುಟುಂಬದ ಸದಸ್ಯರು ಹಾಗೂ ಗೆಳೆಯರು ಮಾತನಾಡಿಕೊಳ್ಳುವಾಗ ಆ ಕುರಿತ ಮಾಹಿತಿಯನ್ನು ನೂತನ ವೈಶಿಷ್ಟ್ಯ ನೀಡಲಿದೆ. ಈ ನೂತನ ವೈಶಿಷ್ಟ್ಯದ ನೆರವಿನಿಂದ ನೀವು ಭಾಗಿಯಾಗಿರುವ ಹರಟೆ ಗುಂಪಿನಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಿದೆಯೇ ಎಂಬ ಕುರಿತು ನಿಮಗೆ ತಿಳಿಯಲಿದೆ. ನೀವು ಭಾಗಿಯಾಗಿರುವ ಹರಟೆ ಗುಂಪಿನಲ್ಲಿ ನಿಮ್ಮ ಕುರಿತು ಯಾರು ಪ್ರಸ್ತಾಪಿಸಿದ್ದಾರೆ ಅಥವಾ ಪ್ರತ್ಯುತ್ತರ ನೀಡಿದ್ದರೆ ಎಂಬ ಅಧಿಸೂಚನೆಯು ಅಂಥ ವ್ಯಕ್ತಿಗಳ ವಾಟ್ಸ್‌ಆಯಪ್‌ ಪ್ರೊಫೈಲ್ ಚಿತ್ರದೊಂದಿಗೆ ಕಾಣಿಸಿಕೊಳ್ಳಲಿದೆ.

                                     ಸಖತ್ತಾಗಿದೆ ಈ ಫೀಚರ್​

      ಈ ಹಂತದಲ್ಲಿ ನೂತನ ವೈಶಿಷ್ಟ್ಯವು ಐಒಎಸ್ ಬೀಟಾ ಪರೀಕ್ಷಾರ್ಥಿಗಳಾಗಿ ಮಾತ್ರ ಬಿಡುಗಡೆಯಾಗಿದೆ ಎಂಬುದನ್ನು ಗಮನಿಸಬೇಕಿದೆ. ಈ ಮಾಹಿತಿಯನ್ನು WABetaInfo ವರದಿಯೊಂದರಲ್ಲಿ ನೀಡಲಾಗಿದ್ದು, ಅದರಲ್ಲಿ "ಈ ವರ್ಷದ ನೂತನ ವೈಶಿಷ್ಟ್ಯ ಅಂತಿಮವಾಗಿ ಲಭ್ಯವಾಗಿದ್ದು, ಈ ವೈಶಿಷ್ಟ್ಯವು ಕೆಲವು ಐಒಎಸ್ ಬೀಟಾ ಪರೀಕ್ಷಾರ್ಥಿಗಳಿಂದ ಪ್ರಶಂಸೆಗೆ ಪಾತ್ರವಾಗುವ ಬಗ್ಗೆ ನನಗೆ ಖಾತ್ರಿಯಿದೆ. ಸದ್ಯ ವಾಟ್ಸ್‌ಆಯಪ್‌ ಅತ್ಯಂತ ಉತ್ತಮ ಅಳವಡಿಕೆಯನ್ನು ಬಿಡುಗಡೆ ಮಾಡುತ್ತಿದ್ದು, ಈ ಅಳವಡಿಕೆಯು ಐಒಎಸ್ ಅಧಿಸೂಚನೆಯಲ್ಲಿ ಪ್ರೊಫೈಲ್ ಚಿತ್ರಗಳನ್ನು ಪ್ರದರ್ಶಿಸಲಿದೆ" ಎಂದು ಹೇಳಲಾಗಿದೆ.

                          WABetaInfo ಮಾಹಿತಿ ಹಂಚಿಕೊಂಡಿದೆ

              ಲಭ್ಯವಿರುವ ಮಾಹಿತಿಯ ಪ್ರಕಾರ, ಹರಟೆ ಹಾಗೂ ಗುಂಪುಗಳಲ್ಲಿ ನೀವು ಹೊಸ ಸಂದೇಶಗಳನ್ನು ಸ್ವೀಕರಿಸಿದಾಗ ಆ ಸಂದೇಶದ ಅಧಿಸೂಚನೆಗಳು ಪ್ರೊಫೈಲ್ ಚಿತ್ರಗಳನ್ನು ಪ್ರದರ್ಶಿಸುವ ನೆರವನ್ನು ಅಳವಡಿಸಿದೆ. ಈ ವೈಶಿಷ್ಟ್ಯವು ಐಒಎಸ್ 15 ಎಪಿಐಗಳನ್ನು ಮಾತ್ರ ಬಳಸುವುದರಿಂದ ಇದನ್ನು ಕೆಲವು ಬೀಟಾ ಪರೀಕ್ಷಾರ್ಥಿಗಳಿಗಾಗಿ ಮಾತ್ರ ಬಿಡುಗಡೆ ಮಾಡಲಾಗಿದೆ ಎಂದೂ WABetaInfo ಮಾಹಿತಿ ನೀಡಿದೆ.

                ಈ ನೂತನ ವೈಶಿಷ್ಟ್ಯವು ನಿಮ್ಮ ವಾಟ್ಸ್‌ಆಯಪ್‌ ಖಾತೆಯಲ್ಲಿ ಲಭ್ಯವಾಗದಿದ್ದರೆ ಬೇಸರಿಸದಿರಿ. ಯಾಕೆಂದರೆ ವಾಟ್ಸ್‌ಆಯಪ್‌ ತಂತ್ರಾಂಶವು ಬೀಟಾ ಹಂತದಲ್ಲಿ ಒಂದು ವೇಳೆ ಎದುರಾಗುವ ಎಲ್ಲ ಬಗೆಯ ಸಂಭವನೀಯ ಅಡೆತಡೆಗಳನ್ನು ನಿವಾರಿಸಿ ಮುಂದಿನ ದಿನಗಳಲ್ಲಿ ಎಲ್ಲ ವಾಟ್ಸ್‌ಆಯಪ್‌ ಬಳಕೆದಾರರಿಗೂ ಈ ವೈಶಿಷ್ಟ್ಯವನ್ನು ಕ್ರಿಯಾಶೀಲಗೊಳಿಸುವ ಯೋಜನೆ ಹೊಂದಿದೆ. ಸದ್ಯ ಈ ವೈಶಿಷ್ಟ್ಯವು ಇನ್ನೂ ಪರೀಕ್ಷಾ ಹಂತದಲ್ಲಿರುವುದರಿಂದ, ನಿರ್ದಿಷ್ಟ ಅಧಿಸೂಚನೆಗಳಿಗೆ ಪ್ರೊಫೈಲ್ ಚಿತ್ರಗಳನ್ನು ಸೇರಿಸಲು ವಾಟ್ಸ್‌ಆಯಪ್‌ಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ವಾಟ್ಸ್‌ಆಯಪ್‌ ಬಳಕೆದಾರರು ಕೇವಲ ಪಠ್ಯ ಅಧಿಸೂಚನೆಯನ್ನು ಮಾತ್ರ ಸ್ವೀಕರಿಸುತ್ತಿದ್ದರು ಎಂಬುದನ್ನು ಗಮನಿಸಬೇಕು.

                                       ಹೊಸ ವೈಶಿಷ್ಟ್ಯವನ್ನು ಪರಿಚಯಿಸುವ ವಾಟ್ಸ್​ಆಯಪ್

             ಇತ್ತೀಚಿನ ದಿನಗಳಲ್ಲಿ ವಾಟ್ಸ್‌ಆಯಪ್‌ ಐಒಎಸ್ ಹಾಗೂ ಆಯಂಡ್ರಾಯ್ಡ್ ಬಳಕೆದಾರರಿಬ್ಬರಿಗೂ ಹಲವಾರು ನವೀಕರಣಗಳನ್ನು ಪರೀಕ್ಷಿಸಿ ಬಿಡುಗಡೆ ಮಾಡುತ್ತಿದೆ. ಈ ಪೈಕಿ ಕೆಲವು ನೂತನ ನವೀಕರಣ ಹಾಗೂ ಅಳವಡಿಕೆಗಳನ್ನು ಹೆಸರಿಸುವುದಾದರೆ, ಧ್ವನಿ ಸಂದೇಶದ ಪೂರ್ವಭಾವಿ ವೈಶಿಷ್ಟ್ಯ, ಹರಟೆಗಳಿಗೆ ಸ್ವಯಂ ಅಳಿಸಿ ಹೋಗುವ ಗಡಿಯಾರ ಮತ್ತಿತರ ವೈಶಿಷ್ಟ್ಯಗಳನ್ನು ಉದಾಹರಿಸಬಹುದಾಗಿದೆ.

           ವಾಟ್ಸ್‌ಆಯಪ್‌ ಜಗತ್ತಿನಾದ್ಯಂತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಂದೇಶ ತಂತ್ರಾಂಶವಾಗಿದ್ದು, ಈವರೆಗೆ ಒಂದು ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈ ತಂತ್ರಾಂಶಕ್ಕೆ ಸಕ್ರಿಯವಾಗಿ ನೂತನ ವೈಶಿಷ್ಟ್ಯಗಳ ಸೇರ್ಪಡೆಯಾಗುತ್ತಿದ್ದು, ಪ್ರತಿ ಕೆಲವೇ ವಾರಗಳಲ್ಲಿ ನಾವೆಲ್ಲ ಕುತೂಹಲಕಾರಿ ಹೊಸ ಆವೃತ್ತಿ ನೋಡುತ್ತಿದ್ದೇವೆ. ಇದಕ್ಕೂ ಮುನ್ನ ವಾಟ್ಸ್‌ಆಯಪ್‌ ತಂತ್ರಾಂಶವು 30 ವಿನೂತನ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿತ್ತು. ಈ ಪೈಕಿ ಹರಟೆ ಗುಂಪುಗಳಲ್ಲಿ ನಮ್ಮ ಪ್ರೊಫೈಲ್ ಚಿತ್ರಗಳನ್ನು ಅಡಗಿಸಿಡುವ ವೈಶಿಷ್ಟ್ಯವೂ ಸೇರಿತ್ತು. ಆದರೀಗ ಹರಟೆ ಗುಂಪುಗಳ ಸಂದೇಶದ ಅಧಿಸೂಚನೆಯನ್ನು ಸಂಬಂಧಿತ ವ್ಯಕ್ತಿಯ ಪ್ರೊಫೈಲ್ ಚಿತ್ರದೊಂದಿಗೆ ಪ್ರದರ್ಶಿಸುವ ನೂತನ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ. ಈ ವೈಶಿಷ್ಟ್ಯವು ಇನ್ನೂ ಪರೀಕ್ಷಾ ಹಂತದಲ್ಲಿದ್ದು, ಸಂಭವನೀಯ ತಾಂತ್ರಿಕ ಅಡೆತಡೆಗಳು ನಿವಾರಣೆಯಾದ ನಂತರ ಎಲ್ಲ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ವರದಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries