ಮಂಜೇಶ್ವರ: ಸಮಗ್ರ ಶಿಕ್ಷಾ ಕೇರಳ *ಬಿ .ಆರ್ .ಸಿ ಮಂಜೇಶ್ವರದ ನೇತೃತ್ವದಲ್ಲಿ ಕಡಂಬಾರು ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಣ್ಣು ಮಕ್ಕಳಿಗಿರುವ 'ಸ-ಧೈರ್ಯ' ಕರಾಟೆ ತರಬೇತಿಯ ಸಮಾರೋಪ ಸಭೆ ಜರಗಿತು.
ತರಬೇತಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸುನಿತಾ ಕೆ.ಬಿ ವಹಿಸಿದರು. ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮ0ಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್. ವಿ ಮಾತನಾಡಿದರು. ತರಬೇತಿ ನೀಡಿದ ಶೈನಿ ದಾಸ್ ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಪಿ. ಟಿ.ಎ ಉಪಾಧ್ಯಕ್ಷ ವಿಜಯ ಭಂಡಾರಿ, ಎಂ. ಪಿ. ಟಿ.ಎ ಅಧ್ಯಕ್ಷೆ ರುಕ್ಸಾನ, ಎಸ್.ಎಂ.ಸಿ.ಉಪಾಧ್ಯಕ್ಷ ಮೈದೀನ್, ಸಿ. ಆರ್ ಸಿ ಸಂಯೋಜಕಿ ಮೋಹಿನಿ ಎಂ.ಎಚ್ ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಮೂಸ ಕುಂಞ ಡಿ ಸ್ವಾಗತಿಸಿ, ಗೋಪಿ .ವಿ. ವಂದಿಸಿದರು. ಇಸ್ಮಾಯಿಲ್ ಮಾಸ್ತರ್ ನಿರೂಪಿಸಿದರು.