ತಿರುವನಂತಪುರ: ರಾಜ್ಯದ ಶಾಲೆಗಳಲ್ಲಿ ಸೋಮವಾರದಿಂದ ಆರಂಭವಾಗುವ ಹತ್ತು, ಹನ್ನೊಂದು ಮತ್ತು ಹನ್ನೆರಡನೇ ತರಗತಿಗಳನ್ನು ಸಂಜೆಯವರೆಗೆ ವಿಸ್ತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿ ಶಾಲೆಗಳು ಮಧ್ಯಾಹ್ನದವರಗೆ ಮಾತ್ರ ಈ ವರೆಗೆ ನಿರ್ವಹಿಸಲು ಅನುಮತಿ ಇತ್ತು. ತರಗತಿಗಳು ಶಿಫ್ಟ್ ಆಧಾರದ ಮೇಲೆ ನಡೆಯುತ್ತಿದ್ದವು. ನಿನ್ನೆ ನಡೆದ ಪರಿಶೀಲನಾ ಸಭೆಯಲ್ಲಿ ಶಾಲೆಗಳು ಪುನರಾರಂಭಿಸಲು ನಿರ್ಧರಿಸಲಾಗಿದೆ.
ಕಳೆದ ತಿಂಗಳು, ಒಂದರಿಂದ ಒಂಬತ್ತನೇ ತರಗತಿವರೆಗಿನ ತರಗತಿಗಳನ್ನು ಆನ್‌ಲೈನ್‌ಗೆ ವರ್ಗಾಯಿಸಲಾಯಿತು. ಇದೀಗ ಸೋಮವಾರದಿಂದ ಹತ್ತು, ಹನ್ನೊಂದು ಮತ್ತು ಹನ್ನೆರಡನೇ ತರಗತಿಗಳು ಪುನರಾರಂಭಗೊಂಡಾಗ ಬೆಳಗ್ಗೆಯಿಂದ ಸಂಜೆಯವರೆಗೆ ತರಗತಿ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಒಂದರಿಂದ ಒಂಬತ್ತನೆಯ ತರಗತಿಗಳು ಫೆ. 14 ರಿಂದ ಪುನಃರಾರಂಭಗೊಳಿಸಲು ತೀರ್ಮಾನಿಸಲಾಗಿದೆ. ಇದನ್ನೂ ಕೂಡ ಬೆಳಗ್ಗೆಯಿಂದ ಸಂಜೆವರೆಗೆ ನಡೆಸಲು ಶಿಕ್ಷಣ ಇಲಾಖೆಯು ಪರಿಶೀಲಿಸುತ್ತಿದೆ.