ಕಾಸರಗೋಡು: ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ (ಆವಾಸ್ ಪ್ಲಸ್) ಯೋಜನೆಯ 100 ಮನೆಗಳ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್ ಹೇಳಿದರು.
ಅವರು ಬ್ಲಾಕ್ ಪಂಚಾಯತ್ ನೇತೃತ್ವದಲ್ಲಿ ಕಾಞಂಗಾಡ್ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ (ಆವಾಸ್ ಪ್ಲಸ್) ಯೋಜನೆಯ ಫಲಾನುಭವಿಗಳ ಸಭೆ ಮತ್ತು ಮೊದಲ ಕಂತಿನ ವಿತರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಕಾಞಂಗಾಡು ಬ್ಲಾಕ್ ನ 5 ಪಂಚಾಯತ್ ಗಳಲ್ಲಿ 15 ಕುಟುಂಬಗಳಿಗೆ ಮೊದಲ ಕಂತನ್ನು ವಿತರಿಸಲಾಯಿತು. ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ. ವಿ. ಶ್ರೀಲತಾ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ಕೆ.ವಿಜಯನ್, ಕೆ. ಸೀತಾ, ಜಂಟಿ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಸಿ. ಆದರ್ಶ್ ಮಾತನಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ಅಬ್ದುಲ್ ರೆಹಮಾನ್ ಸ್ವಾಗತಿಸಿ, ಬ್ಲಾಕ್ ಅಭಿವೃದ್ಧಿ ಅಧಿಕಾರಿ ಬಿ. ಸಂಧ್ಯಾದೇವಿ ವಂದಿಸಿದರು.