ಆದರೆ ಇದೀಗ, ಎಲಾನ್ ಮಸ್ಕ್ ಅವರ ಯೋಜನೆಗೆ ಸೆಡ್ಡು ಹೊಡೆಯಲು ಸಜ್ಜಾಗಿ ನಿಂತಿದೆ ಭಾರತದ ಜಿಯೋ ನೆಟ್‌ವರ್ಕ್. ಇದಾಗಲೇ ಜಿಯೋ ನೆಟ್‌ವರ್ಕ್ ಆರಂಭಿಸಿ ಬಿರುಗಾಳಿ ಎಬ್ಬಿಸಿರುವ ರಿಲಯನ್ಸ್ ಜಿಯೋ, ಇದೀಗ ಎಲಾನ್ ಮಸ್ಕ್‌ಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಜಿಯೋ ಸ್ಪೇಸ್ ಟೆಕ್ನಾಲಜಿ ಲಿಮಿಟೆಡ್ ಎಂಬ ಉದ್ಯಮ ಆರಂಭಿಸಿದೆ. ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ 100 ಜಿಬಿಪಿಎಸ್ (ಗಿಗಾ ಬೈಟ್ ಪರ್ ಸೆಕೆಂಡ್) ವೇಗದಲ್ಲಿ ಇಂಟರ್‌ನೆಟ್ ಸೇವೆ ಒದಗಿಸಲಿದೆ.
ರಿಲಯನ್ಸ್ ಜಿಯೋ ಲಕ್ಸೆಂಬರ್ಗ್ ಮೂಲದ ದೂರಸಂಪರ್ಕ ಕಂಪನಿ ಎಸ್‌ಇಎಸ್‌ನೊಂದಿಗೆ ಜಂಟಿಯಾಗಿ ಈ ಯೋಜನೆಯನ್ನು ಆರಂಭಿಸಲಿದೆ. ಜಿಯೋನ ಬ್ರಾಡ್‌ಬ್ಯಾಂಡ್ ಸೇವೆಯು ಎಂಟರ್‌ಪ್ರೈಸಸ್, ಮೊಬೈಲ್ ಬ್ಯಾಕ್‌ಹಾಲ್, ಹಾಗೂ ಚಿಲ್ಲರೆ ಗ್ರಾಹಕರಿಗೆ 100 ಜಿಬಿಪಿಎಸ್ ವರೆಗಿನ ಗರಿಷ್ಠ ವೇಗದಲ್ಲಿ ಇಂಟರ್‌ನೆಟ್ ಒದಗಿಸುವ ಸಾಮರ್ಥ್ಯ ಹೊಂದಿರುವುದಾಗಿ ಜಿಯೊ ನೆಟ್‌ವರ್ಕ್ ತಿಳಿಸಿದೆ. ಇದಾಗಲೇ ಕಾರ್ಯಾರಂಭವಾಗಿದ್ದು, ಎಲಾನ್ ಮಸ್ಕ್ ಸ್ಟಾರ್‌ಲಿಂಕ್‌ಗೆ ಪೈಪೋಟಿ ನೀಡುವಷ್ಟು ವೇಗದಲ್ಲಿ ಹೊಸ ಯೋಜನೆಗೆ ಸಿದ್ಧತೆ ನಡೆಸಿದೆ.