ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ನೇತೃತ್ವದಲ್ಲಿ ಮಲಬಾರ್ ದಂಗೆಯ 100 ನೇ ವಾರ್ಷಿಕ ಸಮಾರೋಪ ಸಮಾರಂಭ 'ವಿಚಾರ ಗೋಷ್ಠಿ' ಕಾರ್ಯಕ್ರಮ ಫೆಬ್ರವರಿ 26 ಬೆಳಿಗ್ಗೆ 10 ರಿಂದ ಕೆ .ಯಸ್ .ಟಿ .ಎ ಭವನ ಹೊಸಂಗಡಿಯಲ್ಲಿ ನಡೆಯಲಿದೆ.
ರಾಜ್ಯ ಲೈಬ್ರೆರಿ ಕೌನ್ಸಿಲ್ ಮಾಜಿ ಕಾರ್ಯದರ್ಶಿ ನ್ಯಾಯವಾದಿ. ಪಿ ಅಪ್ಪುಕುಟ್ಟನ್ ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯ ಲೈಬ್ರೆರಿ ಕೌನ್ಸಿಲ್ ಸದಸ್ಯ ದಿಲೀಪ್ ಕುಮಾರ್ .ಪಿ ವಿಷಯ ಮಂಡನೆ ಮಾಡುವರು. 'ಪಿ ಯನ್ ಪಣಿಕ್ಕರ್' ಪ್ರಶಸ್ತಿ ಪುರಸ್ಕøತ ನ್ಯಾಯವಾದಿ. ಪಿ ಅಪ್ಪುಕುಟ್ಟನ್ ರವರನ್ನು ಸನ್ಮಾನಿಸಲಿದ್ದಾರೆ. ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಹಿರಿಯ ಸದಸ್ಯ ಯಸ್. ನಾರಾಯಣ ಭಟ್ ಮತ್ತು ಕನ್ನಡ, ಮಲಯಾಳಂ ಜಿಲ್ಲಾ-ತಾಲೂಕು ವಾಚನ ಸ್ಪರ್ಧೆಯ ವಿಜಯಿಗಳಿಗೆ ನಗದು ಹಾಗೂ ಪ್ರಶಸ್ತಿ ಪತ್ರ ವಿತರಣೆ ನಡೆಯಲಿದೆ.
ತಾಲೂಕು ಲೈಬ್ರೆರಿ ಕೌನ್ಸಿಲ್ ಪದಾಧಿಕಾರಿಗಳಾದ ಅಬ್ದುಲ್ಲಾ ಕೆ, ಕಮಲಾಕ್ಷ ಡಿ, ಅಹ್ಮದ್ ಹುಸೈನ್, ವಿಜಯನ್ ಕೆ ಟಿ, ಜಮೀಲಾ ಸಿದ್ದಿಕ್ , ಶಾಮ ಭಟ್ ಮತ್ತು ಶ್ರೀಕುಮಾರಿ ಕೆ ಉಪಸ್ಥಿತರಿರುವರು.