HEALTH TIPS

ದೇಶಾದ್ಯಂತ 5,795 ಕಿ.ಮೀ.ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಒಂದು ಲಕ್ಷ ಕೋ.ರೂ.ಗಳ ಯೋಜನೆಗೆ ಚಾಲನೆ

                ನವದೆಹಲಿ :ದೇಶದ 117 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ 5,795 ಕಿ.ಮೀ.ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಒಂದು ಲಕ್ಷ ಕೋ.ರೂ.ಗಳ ಯೋಜನೆಗೆ ಕೇಂದ್ರವು ಚಾಲನೆ ನೀಡಲಿದೆ.

‌            66,000 ಕೋ.ರೂ.ವೆಚ್ಚದಲ್ಲಿ 222 ಯೋಜನೆಗಳಡಿ ಈ ಜಿಲ್ಲೆಗಳಲ್ಲಿ ಈಗಾಗಲೇ ನಿರ್ಮಾಣಗೊಳ್ಳುತ್ತಿರುವ 5,566 ಕಿ.ಮೀ.ಹೆದ್ದಾರಿಗಳಿಗೆ ಹೆಚ್ಚುವರಿಯಾಗಿ ವಿಸ್ತರಣೆಗಾಗಿ 221 ಯೋಜನೆಗಳನ್ನು ರಸ್ತೆ ಸಚಿವಾಲಯವು ಗುರುತಿಸಿದೆ.

            ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ)ವು ನೂತನ ಹೆದ್ದಾರಿ ಯೋಜನೆಗಳಿಗಾಗಿ 1.04 ಲ.ಕೋ.ರೂ.ಗಳನ್ನು ವೆಚ್ಚ ಮಾಡಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ನಾಲ್ಕು ವರ್ಷಗಳಷ್ಟು ಹಳೆಯದಾಗಿರುವ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವು ಕೇಂದ್ರ ಮತ್ತು ರಾಜ್ಯ ಯೋಜನೆಗಳ ಮೇಳೈಸುವಿಕೆ, ಕೇಂದ್ರ ಮತ್ತು ರಾಜ್ಯಮಟ್ಟದ ಅಧಿಕಾರಿಗಳ ಸಹಯೋಗ ಮತ್ತು ಮಾಸಿಕ ಜಿಲ್ಲಾ ಶ್ರೇಯಾಂಕಗಳ ಮೂಲಕ ಕನಿಷ್ಠ ಅಭಿವೃದ್ಧಿಗೊಂಡಿರುವ ಜಿಲ್ಲೆಗಳ ತ್ವರಿತ ಪರಿವರ್ತನೆಯ ಉದ್ದೇಶವನ್ನು ಹೊಂದಿದೆ.
               ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಮೊದಲ ಮತ್ತು ಎರಡನೇ ಹಂತದಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ, ಜಾರ್ಖಂಡ್, ಒಡಿಶಾ, ಪ.ಬಂಗಾಳ,ತೆಲಂಗಾಣ ಇತ್ಯಾದಿ ರಾಜ್ಯಗಳ ಹಲವಾರು ಜಿಲ್ಲೆಗಳು ಒಳಗೊಂಡಿವೆ.

              ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಮಾಹಿತಿಯಂತೆ ಎಲ್ಲ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಜೋಡಣೆಗೊಂಡಿವೆ ಮತ್ತು ವಿಸ್ತರಣೆಯು ಈ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲಿದೆ.
             ಕಳೆದ ಐದು ವರ್ಷಗಳಲ್ಲಿ ಸುಮಾರು 6,575 ಕಿ.ಮೀ.ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣಗೊಂಡಿದ್ದು,ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಸಂಪರ್ಕಿಸಲಾಗಿದೆ. ಹಾಲಿ ನಡೆಯುತ್ತಿರುವ ಮತ್ತು ಮುಂಬರುವ ಯೋಜನೆಗಳನ್ನು ಸೇರಿಸಿದರೆ ಮುಂದಿನ ಐದು ವರ್ಷಗಳಲ್ಲಿ ಈ ಜಿಲ್ಲೆಗಳಲ್ಲಿಯ ರಾಷ್ಟ್ರೀಯ ಹೆದ್ದಾರಿ ಜಾಲವು 18,000ಕ್ಕೂ ಅಧಿಕ ಕಿ.ಮೀ.ಗೆ ವಿಸ್ತರಣೆಗೊಳ್ಳಲಿದೆ.

             ಮಾನವ ಅಭಿವೃದ್ಧಿ ಸೂಚ್ಯಂಕದ ಮೇಲೆ ಪರಿಣಾಮವನ್ನು ಬೀರುವ ಆರೋಗ್ಯ ಮತ್ತು ಪೋಷಣೆ,ಶಿಕ್ಷಣ,ಕೃಷಿ ಮತ್ತು ಜಲ ಸಂಪನ್ಮೂಲಗಳು, ಆರ್ಥಿಕ ಸೇರ್ಪಡೆ,ಕೌಶಲ್ಯಾಭಿವೃದ್ಧಿ ಮತ್ತು ಪ್ರಾಥಮಿಕ ಮೂಲಸೌಕರ್ಯಗಳ ಆಧಾರದಲ್ಲಿ ನೀತಿ ಆಯೋಗವು ಈ ಜಿಲ್ಲೆಗಳನ್ನು ಗುರುತಿಸಿದೆ.

2022-23ನೇ ಸಾಲಿನ ಕೇಂದ್ರ ಮುಂಗಡಪತ್ರವು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಮೂಲಭೂತ ಸೌಕರ್ಯ ಅಭಿವೃದ್ಧಿಯ ಮೇಲೆ ಗಮನವನ್ನು ಕೇಂದ್ರೀಕರಿಸಿದೆ.

               ಹಿಂದಿನ ವರ್ಷದ ಮುಂಗಡಪತ್ರ ಅಂದಾಜಿನಲ್ಲಿಯ 1.18 ಲ.ಕೋ.ರೂ.ಗೆ ಹೋಲಿಸಿದರೆ 2022-23ನೇ ಸಾಲಿಗೆ ಶೇ.68ರಷ್ಟು ಹೆಚ್ಚು,ಅಂದರೆ ಒಟ್ಟು 1.99 ಲ.ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿದೆ.
          ಹೆಚ್ಚಿಸಲಾಗಿರುವ ಬಜೆಟ್ ಹಣದಲ್ಲಿ ಬಹುಭಾಗವನ್ನು ಎನ್‌ಎಚ್‌ಎಐಗಾಗಿ ಮೀಸಲಿರಿಸಲಾಗಿದೆ. ಕಳೆದ ವರ್ಷದ 76,665 ಕೋ.ರೂ.ಗಳಿಗೆ ಹೋಲಿಸಿದರೆ 2022-23ನೇ ಸಾಲಿಗೆ ಅದಕ್ಕೆ ಶೇ.133ರಷ್ಟು ಹೆಚ್ಚು ಅಂದರೆ 1.34 ಲ.ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿದೆ.

ಹೆಚ್ಚುವರಿ ನಿಧಿಯೊಂದಿಗೆ ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಸಂಪರ್ಕಗಳನ್ನು ಬಲಗೊಳಿಸುವುದು ಸೇರಿದಂತೆ ಹೆದ್ದಾರಿ ಕಾರ್ಯಕ್ರಮಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ.
         ವಿತ್ತವರ್ಷ 2022ರಲ್ಲಿ 12,000 ಕಿ.ಮೀ.ಹೆದ್ದಾರಿ ನಿರ್ಮಾಣದ ಗುರಿಯನ್ನು ಹೊಂದಲಾಗಿದ್ದು,ವಿತ್ತವರ್ಷ 2023ಕ್ಕೆ ಗುರಿಯನ್ನು ಪ್ರಗತಿಯಲ್ಲಿರುವ ಯೋಜನೆಗಳು ಸೇರಿದಂತೆ 25,000 ಕಿ.ಮೀ.ಗಳಿಗೆ ಇಮ್ಮಡಿಗೊಳಿಸಲಾಗಿದೆ.

          2014-15ರಿಂದೀಚಿಗೆ ಎನ್‌ಎಚ್‌ಎಐದ ಸಾಲವು 24,188 ಕೋ.ರೂ.ಗಳಿಂದ 3.44 ಲ.ಕೋ.ರೂ.ಗೇರಿದೆ,ಅಂದರೆ 14 ಪಟ್ಟು ಹೆಚ್ಚಾಗಿದೆ. 2024-25ರ ವೇಳೆಗೆ ಸಾಲದ ಪ್ರಮಾಣವನ್ನು ಒಂದು ಲ.ಕೋ.ರೂ.ಗಳಷ್ಟು ಕಡಿಮೆ ಮಾಡಲು ಸರಕಾರವು ಉದ್ದೇಶಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries