ಕಾಸರಗೋಡು: ಕುಂಬಳೆಯಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿ ಸ್ಥಾಯೀ ಸಮಿತಿ ಅಧ್ಯಕ್ಷನಾಗಲು ಬೆಂಬಲ ನೀಡಿದ ಬಿಜೆಪಿಯ ನಿಲುವನ್ನು ಪ್ರತಿಭಟಿಸಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ರಮೇಶ್ ಸಹಿತ 11 ಮಂದಿ ಮುಖಂಡರು ತಮ್ಮ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಕುಂಬಳೆ ಮಂಡಲ ಅಧ್ಯಕ್ಷ ಪಿ.ವಿ.ಸುನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಪಿ.ಅನಿಲ್ ಕುಮಾರ್, ಒಬಿಸಿ ಮೋರ್ಚಾ ನೇತಾರ ನ್ಯಾಯವಾದಿ ನವೀನ್ ರಾಜ್, ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಪದ್ಮನಾಭ ಕಡಪ್ಪುರ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕಿಶೋರ್, ಜಿಲ್ಲಾ ಕೋಶಾಧಿಕಾರಿ ಅಜೇಶ್, ಮಂಜೇಶ್ವರ ಮಂಡಲ ಸೆಕ್ರೆಟರಿಗಳಾದ ರಾಜೇಶ್, ಕೃಷ್ಣ, ಮೊಗ್ರಾಲ್ ಪುತ್ತೂರು ಪಂಚಾಯತಿ ಸಮಿತಿ ಅಧ್ಯಕ್ಷ ಯೋಗೇಶ್, ಮಂಜೇಶ್ವರ ಮಂಡಲ ಕೋ-ಆರ್ಡಿನೇಟರ್ ಸಂತೋಷ್ ರಾಜೀನಾಮೆ ನೀಡಿದ್ದಾರೆ.