HEALTH TIPS

ಫೆ. 11ರಂದು ವಿಜ್ಞಾನ ವಲಯದ ಮಹಿಳೆ-ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆ; ಗೀತಾಂಜಲಿ ರಾವ್ ಉಪಸ್ಥಿತಿ

           ಚೆನ್ನೈ: ಚೆನ್ನೈನಲ್ಲಿರುವ ಅಮೆರಿಕ ದೂತಾವಾಸವು ಹೈದರಾಬಾದ್, ಕೋಲ್ಕತ ಮತ್ತು ಮುಂಬೈನ ಅಮೆರಿಕ ದೂತಾವಾಸಗಳ ಸಮನ್ವಯದಲ್ಲಿ ಫೆ. 11ರ ಶುಕ್ರವಾರದಂದು ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನ ಆಚರಿಸಲಿದೆ. ಇದರಲ್ಲಿ ಭಾರತೀಯ ಮೂಲದ ಅಮೆರಿಕನ್​ ಹದಿಹರೆಯದ ಸಂಶೋಧಕಿ ಮತ್ತು ವಿಜ್ಞಾನಿ ಗೀತಾಂಜಲಿ ರಾವ್ ಭಾಗವಹಿಸಲಿದ್ದಾರೆ.

          ಡಯಾಸ್ಪೊರಾ ಡಿಪ್ಲೊಮಸಿ ಸರಣಿಯಲ್ಲಿನ ಆರನೇ ಕಾರ್ಯಕ್ರಮ ವರ್ಚುವಲ್ ಆಗಿ ಫೆ. 11ರ ಸಂಜೆ 6:45ಕ್ಕೆ ನಡೆಯಲಿದ್ದು, ಆಗ ಐದು ನಿಮಿಷಗಳ ಅವಧಿಯ 'ಸರ್ಚ್ ಆನ್: ಪಾಸಿಟಿವ್ ಕರೆಂಟ್' ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ರಾವ್ ಅವರ ಆವಿಷ್ಕಾರಗಳಲ್ಲಿ ಒಂದಾದ ನೀರಿನಲ್ಲಿ ಸೀಸದ ಮಾಲಿನ್ಯವನ್ನು ಪತ್ತೆಹಚ್ಚುವ ಮೊಬೈಲ್ ಸಾಧನದ ವಿವರ ಅದರಲ್ಲಿರಲಿದೆ.


           ' ವೈ ವೇಸ್ಟ್?' ಎನ್‌ಜಿಒ ಸಂಸ್ಥಾಪಕಿ, 'ವಾಟರ್ ಗರ್ಲ್ ಆಫ್ ಇಂಡಿಯಾ' ಎಂದೇ ಹೆಸರಾಗಿರುವ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ಗರ್ವಿತಾ ಗುಲ್ಹಾಟಿ ಅವರು ಗೀತಾಂಜಲಿ ರಾವ್ ಅವರ ಸಂದರ್ಶನ ನಡೆಸಲಿದ್ದಾರೆ.

            ಈ ಸಂವಾದದಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (STEM) ಪ್ರೀತಿ ಇಟ್ಟುಕೊಂಡಿರುವ ಭಾರತೀಯ ಮೂಲದ ಅಮೆರಿಕನ್ ಎಂಬ ಗುರುತಿನಲ್ಲಿ ಬೆಳೆಯುವ ಪಯಣದ ಬಗ್ಗೆ ಮಾತನಾಡಲಿದ್ದಾರೆ.
            ಇದಲ್ಲದೆ STEM ಕಲಿತ ಹೆಣ್ಣು ಮಕ್ಕಳು ಹೇಗೆ ವಿಶ್ವವನ್ನು ಬದಲಿಸಬಲ್ಲರು ಎಂಬ ಕನಸನ್ನು ಹಂಚಿಕೊಳ್ಳಲಿದ್ದಾರೆ. ಹಾಗೆಯೇ ಅಮೆರಿಕದಲ್ಲಿನ ಪ್ರಯೋಗಾತ್ಮಕ ಕಲಿಕೆಯ ಅವಕಾಶಗಳು ಮತ್ತು ಅಮೆರಿಕನ್​ ಶಾಲೆಗಳಲ್ಲಿ STEM ಶಿಕ್ಷಣದ ಕುರಿತು ಚರ್ಚಿಸಲಿದ್ದಾರೆ.

            ನಮ್ಮ ಡಯಾಸ್ಪೊರಾ ಡಿಪ್ಲೊಮಸಿ ಸ್ಪೀಕರ್ ಸರಣಿಯ ಭಾಗವಾಗಿ ನಡೆಯುತ್ತಿರುವ ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಗೀತಾಂಜಲಿ ರಾವ್ ಭಾಗವಹಿಸುವಿಕೆಗೆ ಉತ್ಸುಕರಾಗಿದ್ದೇವೆ. ಭಾರತದಲ್ಲಿನ ಯುಎಸ್​ ಮಿಷನ್ ಪರವಾಗಿ, ಗೀತಾಂಜಲಿ ಅವರ ಸಾಧನೆಗಳಿಗಾಗಿ ನಾನು ಶ್ಲಾಘಿಸುತ್ತೇನೆ ಎಂದು ಚೆನ್ನೈನಲ್ಲಿರುವ ಅಮೆರಿಕ ದೂತಾವಾಸದ ಕಾನ್ಸಲ್ ಜನರಲ್ ಜುಡಿತ್ ರೇವಿನ್ ಹೇಳಿದ್ದಾರೆ.

            ಇದು ಯುವಜನರಿಗೆ, ವಿಶೇಷವಾಗಿ ಹುಡುಗಿಯರಿಗೆ, ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ತಮ್ಮ ಭವಿಷ್ಯದ ವೃತ್ತಿಜೀವನದಲ್ಲಿ STEM ವಿಷಯಗಳನ್ನು ಪರಿಗಣಿಸಲು ಸ್ಫೂರ್ತಿಯಾಗಿದೆ. ಯುನೈಟೆಡ್ ಸ್ಟೇಟ್ಸ್ STEM ಶಿಕ್ಷಣ ಮತ್ತು ಆವಿಷ್ಕಾರಗಳಲ್ಲಿ ಮುಂಚೂಣಿಯಲ್ಲಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಯನ ಮಾಡಲು ಮತ್ತು ಅವರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳ ಬಯಸುವ ಆಸಕ್ತ ವಿದ್ಯಾರ್ಥಿಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ರೇವಿನ್ ಹೇಳಿದ್ದಾರೆ.

ರಾವ್ ಅವರ ಆವಿಷ್ಕಾರಗಳು ಮತ್ತು ಭಾರತ ಸೇರಿ ಜಗತ್ತಿನಾದ್ಯಂತ ಯುವಜನರಿಗಾಗಿ ಅವರು ನಡೆಸುವ STEM ಕಾರ್ಯಾಗಾರಗಳನ್ನು ಗುರುತಿಸಿ 2020ರಲ್ಲಿ ಟೈಮ್​ ನಿಯತಕಾಲಿಕ ಅದೇ ಮೊದಲ ಬಾರಿ ಸ್ಥಾಪಿಸಲಾದ 'ಕಿಡ್ ಆಫ್ ದ ಇಯರ್' ಪುರಸ್ಕಾರ ನೀಡಿತ್ತು. ಈ ವರ್ಚುವಲ್ ಪ್ರೋಗ್ರಾಂನಲ್ಲಿ ಭಾಗವಹಿಸಲು ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
ನೋಂದಣಿಗೆ ಈ ಕ್ಯೂ ಆರ್​ ಕೋಡ್ ಸ್ಕ್ಯಾನ್ ಮಾಡಬಹುದು. 

              ರಾವ್ ಅವರ ಆವಿಷ್ಕಾರಗಳು ಮತ್ತು ಭಾರತ ಸೇರಿ ಜಗತ್ತಿನಾದ್ಯಂತ ಯುವಜನರಿಗಾಗಿ ಅವರು ನಡೆಸುವ STEM ಕಾರ್ಯಾಗಾರಗಳನ್ನು ಗುರುತಿಸಿ 2020ರಲ್ಲಿ ಟೈಮ್​ ನಿಯತಕಾಲಿಕ ಅದೇ ಮೊದಲ ಬಾರಿ ಸ್ಥಾಪಿಸಲಾದ 'ಕಿಡ್ ಆಫ್ ದ ಇಯರ್' ಪುರಸ್ಕಾರ ನೀಡಿತ್ತು. ಈ ವರ್ಚುವಲ್ ಪ್ರೋಗ್ರಾಂನಲ್ಲಿ ಭಾಗವಹಿಸಲು ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.

ನೋಂದಣಿಗೆ ಈ ಕ್ಯೂ ಆರ್​ ಕೋಡ್ ಸ್ಕ್ಯಾನ್ ಮಾಡಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries