ಮಂಜೇಶ್ವರ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಪ್ರಾಯೋಜಕತ್ವದಲ್ಲಿ ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ಇವರ ಆಶ್ರಯದಲ್ಲಿ "ಹಿರಿಯರ ನೆನಪು" ಕಾರ್ಯಕ್ರಮ ಫೆಬ್ರವರಿ 11ರಂದು ಪೂರ್ವಾಹ್ನ 10ರಿಂದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಲಿದೆ.
ಸಮಾರಂಭದ ಭಾಗವಾಗಿ ಕೀರ್ತಿಶೇಷ ಹಿರಿಯ ವೇಶಧಾರಿ ಮುಂದಿಲ ಕೃಷ್ಣ ಭಟ್ ಅವರ ಸಂಸ್ಮರಣೆ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ದಾಮೋದರ ಶೆಟ್ಟಿ ಎಂ ವಹಿಸುವರು. ರಾಜಾರಾಮ ರಾವ್ ಟಿ ಮೀಯಪದವು ಸ|ಂಸ್ಮರಣಾ ಭಾಷಣಗೈಯ್ಯುವರು. ಕ್ಯಾಂಪ್ಕೋ ನಿರ್ದೇಶಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕ್ಷೇತ್ರದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ, ಗುರುನರಸಿಂಹ ಯಕ್ಷಬಳUದ ಅಧ್ಯಕ್ಷ ವೇ.ಮೂ. ಗಣೇಶ ನಾವಡ, ಶ್ರೀಮಹಾಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಶುಭಾಶಂಸನೆ ಗೈಯ್ಯುವರು. ಬಳಿಕ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದಿಂದ ಗುರುದಕ್ಷಿಣೆ ಯಕ್ಷಗಾನ ತಾಳಮದ್ದಳೆ ಜರಗಲಿದೆ.