ತಿರುವನಂತಪುರ: ರಾಜ್ಯ ವಿಧಾನಸಭೆ ಅಧಿವೇಶನ ಇದೇ 18ರಂದು ಆರಂಭವಾಗಲಿದೆ. ಬಜೆಟ್ ಸಭೆಯನ್ನು ಎರಡು ಹಂತಗಳಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಸಿಪಿಎಂ ರಾಜ್ಯ ಸಮಾವೇಶ ಆರಂಭವಾಗಲಿರುವುದರಿಂದ ಈ ಬಾರಿಯ ಬಜೆಟ್ ಅಧಿವೇಶನ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ರಾಜ್ಯಪಾಲರ ವಂದನಾ ನಿರ್ಣಯದೊಂದಿಗೆ ಅಧಿವೇಶನ ಆರಂಭವಾಗಲಿದೆ. ಸಂಪುಟ ಸಭೆ ಭಾಷಣಕ್ಕೆ ಅನುಮೋದನೆ ನೀಡಿದೆ.