ಕಾಸರಗೋಡು: ಬೆದ್ರಡ್ಕ ನೀರಾಳ ಶ್ರೀ ಧೂಮಾವತೀ ಮತ್ತು ಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಕಲಶೋತ್ಸವ ಮೇ 12ರಂದು ನಡೆಯಲಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ದೈವಸ್ಥಾನ ವಠಾರದಲ್ಲಿ ಜರುಗಿತು.
ಗೌರವ ಮಾರ್ಗದರ್ಶಕರಾಗಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಸಮಿತಿ ಮುನ್ನಡೆಸಲಿದ್ದಾರೆ. ಗೌರವಾಧ್ಯಕ್ಷರಾಗಿ ಪ್ರಭಾಕರ ಆಳ್ವ ಕೋಟೆಕುಂಜ, ಪುತ್ತೂರುಕೊಟ್ಯ ನಾರಾಯಣ ಪೂಜಾರಿ, ಪ್ರಭಾಕರ ಕಾರಂತ ದೇಶಮಂಗಲ, ಬಟ್ಯಪ್ಪ ಪೂಜಾರಿ ಮಾಣಿಗೆ ಹಿತ್ಲು ಅವರನ್ನು ಆಯ್ಕೆ ಮಾಡಲಾಯಿತು. ಮೋಹನ್ ಕುಮಾರ್ ಶೆಟ್ಟಿ ಅಡ್ಕ ಅಧ್ಯಕ್ಷ, ವೆಂಕಟ್ರಮಣ ಹೊಳ್ಳ ನೀರಾಳ, ರವೀಂದ್ರ ರೈ ಸಿರಿಬಾಗಿಲು, ಶೀನ ಶೆಟ್ಟಿ ಕಜೆ, ಪಾಂಡುರಂಗ ರಾವ್ ನೀರಾಳ, ಕೃಷ್ಣ ಹೊಳ್ಳ ನೀರಾಳ, ರವೀಂದ್ರ ಶೆಟ್ಟಿ ಕಜೆ, ಈಶ್ವರ ಪೂಜಾರಿ ಮಾಣಿಗೆಹಿತ್ಲು, ಶಾಂಕರಪೂಜಾರಿ ಅಮ್ಚೆಗೆರೆ, ಪದ್ಮನಾಭ ಆಚಾರ್ ಕಂಬಾರ್, ನಾರಾಯಣ ಪೂಜಾರಿ ಇಳಂತಿಲ, ಶಿವಾನಂದ ಪೆರ್ಲ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬಿ.ಪಿ ಶೇಣಿ ಪ್ರಧಾನ ಕಾರ್ಯದರ್ಶಿ, ಚಂದ್ರಶೇಖರ ಪೂಜಾರಿ ನೀರಾಳ ಕೋಶಾಧಿಕಾರಿ, 15ಮಂದಿ ಕಾರ್ಯದರ್ಶಿಗಳು, 25ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಆಯ್ಕೆ ಮಾಡಲಾಯಿತು. ಫೆ. 15ರಂದು ನಡೆಯಲಿರುವ ಸಮಿತಿ ಸಭೆಯಲ್ಲಿ ಉಪಸಮಿತಿ, ಮಹಿಳಾ ಸಮಿತಿ ರಚಿಸಿ ಪದಾಧಿಕಾರಿಗಳ ಆಯ್ಕೆ ನಡೆಸಲು ಸಭೆ ತೀರ್ಮಾನಿಸಿತು.
ಬಿ.ಪಿ ಶೇಣಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸವಗತಿಸಿದರು. ಚಂದ್ರಶೇಖರ ಪೂಜಾರಿ ನೀರಾಳ ವಂದಿಸಿದರು.