ಬದಿಯಡ್ಕ: ಬೇಳ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ಶ್ರೀಬ್ರಹ್ಮಬಲಿ ಹಾಗೂ ಬೈದರ್ಕಳ ನೇಮೋತ್ಸವ ಫೆ.12 ರಂದು ಬ್ರಹ್ಮಶ್ರೀ ಉಣಿಯತ್ತಾಯ ವಿಷ್ಣು ಆಸ್ರದ ಮಾರ್ಗದರ್ಶನದಲ್ಲಿ ಬಾಳೆಕಲ್ಲು ಕೊರಗಪ್ಪ ಪೂಜಾರಿಯವರ ನೇತೃತ್ವದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಫೆ.12 ರಂದು ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, 10ಕ್ಕೆ ಬ್ರಹ್ಮಶ್ರೀ ವಿಷ್ಣು ಆಸ್ರದ ನೇತೃತ್ವದಲ್ಲಿ ಬ್ರಹ್ಮ ತಂಬಿಲ, 11 ಕ್ಕೆ ಗರೋಡಿ ಮನೆಯಿಂದ ಭಂಡಾರ ಹೊರಡುವುದು, ಮಧ್ಯಾಹ್ನ 1ಕ್ಕೆ ಅನ್ನದಾನ ನಡೆಯಲಿದೆ. 2 ಕ್ಕೆ ಶುದ್ದಕಲಶ ಹೋಮ ನಡೆಯಲಿದೆ. ರಾತ್ರಿ 9ಕ್ಕೆ ಶ್ರೀಬೈದರ್ಕಳ ಗರೋಡಿ ಇಳಿಯುವುದು ಮತ್ತು ಶ್ರೀಬ್ರಹ್ಮಬಲಿ, 11 ಗಂಟೆಗೆ ಶ್ರೀಬ್ರಹ್ಮ ಬೈದರ್ಕಳ ಸುರಿಗೆ ಒಪ್ಪಿಸುವುಉದ, ರಾತ್ರಿ 1 ಕ್ಕೆ ಶ್ರೀಮಾಯಂದಾಳ ದೇವಿಯ ಉತ್ಸವ, ಫೆ.13 ರಂದು ಮುಂಜಾನೆ 4ಕ್ಕೆ ಪೂಜಾರಿಗಳ ಸೇಟು, ಪ್ರಾತಃಕಾಲ 6ಕ್ಕೆ ಗಂಧ ಪ್ರಸಾದ ವಿತರu, ಬೆಳಿಗ್ಗೆ 8ಕ್ಕೆ ಭಂಡಾರ ಒಳಗಿರಿಸುವುದರೊಂದಿಗೆ ನೇಮೋತ್ಸವ ಸಂಪನ್ನಗೊಳ್ಳಲಿದೆ.