ಕಾಸರಗೋಡು: ವಿವಾಹ ಸಂಬಂಧದಲ್ಲಿ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ವಿವಾಹಪೂರ್ವ ಸಮಾಲೋಚನೆ ಕಡ್ಡಾಯಗೊಳಿಸಲು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ನ್ಯಾಯವಾದಿ ಪಿ.ಸತಿದೇವಿ ಹೇಳಿದರು. ವಿವಾಹ ನೋಂದಣಿ ಪ್ರಸ್ತುತ ಕಾನೂನು ಬಾಧ್ಯತೆಯಾಗಿದೆ. ದಾಖಲಾತಿ ಜತೆಗೆ ವಿವಾಹ ಪೂರ್ವ ಸಮಾಲೋಚನೆ ನಡೆಸಲಾಗಿದೆ ಎಂದು ದೃಢೀಕರಿಸುವ ಮಾದರಿಯಲ್ಲಿ ಕೌನ್ಸೆಲಿಂಗ್ ಕಡ್ಡಾಯಗೊಳಿಸುವುದು ಉತ್ತಮ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ಪಿ ಸತೀದೇವಿ ಹೇಳಿದರು.
ನಿನ್ನೆ ಕಾಸರಗೋಡು ಕಲೆಕ್ಟರೇಟ್ ಸಭಾ|ಂಗಣದಲ್ಲಿ ನಡೆದ ಮಹಿಳಾ ಆಯೋಗದ ಅದಾಲತ್ ಬಳಿಕ ಅವರು ಮಾತನಾಡಿದರು.
ಅಂತಿಮ ವರ್ಷದ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜು ಜ್ಯೋತಿ ಮತ್ತು ಮುಖಾಮುಖಿ ಕಾರ್ಯಕ್ರಮಗಳ ಮೂಲಕ ಕೌನ್ಸೆಲಿಂಗ್ ನೀಡಲಾಗುವುದು. ಆಯೋಗದ ಮುಂದಿರುವ ಹೆಚ್ಚಿನ ದೂರುಗಳು ಪ್ರಾದೇಶಿಕ ಮತ್ತು ಕೌಟುಂಬಿಕ ಹಿನ್ನೆಲೆಯಿಂದ ಬಂದವುಗಳಾಗಿವೆ. ಪಂಚಾಯಿತಿ ಮಟ್ಟದಲ್ಲಿ ಶಾಶ್ವತ ಕೌನ್ಸೆಲಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ಈಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ವಾರ್ಡ್ ಮಟ್ಟದ ಜಾಗೃತ ಸಮಿತಿಯನ್ನು ಬಲಪಡಿಸಬೇಕು. ವಾರ್ಡ್ ಮಟ್ಟದ ಜಾಗೃತ ಸಮಿತಿಗಳು ಪ್ರತಿ ತಿಂಗಳು ನಿಯಮಿತವಾಗಿ ಸಭೆ ಸೇರಿ ಪ್ರತಿಯೊಂದು ಪ್ರದೇಶದ ಸಮಸ್ಯೆಗಳನ್ನು ಆಯೋಗದ ಮುಂದೆ ಚರ್ಚಿಸುವ ವಾತಾವರಣ ನಿರ್ಮಿಸಬೇಕು. ಗ್ರಾಮ ಮಟ್ಟದಲ್ಲಿ ಕುಂದುಕೊರತೆಗಳನ್ನು ಜಾಗೃತ ಸಮಿತಿಗಳ ಮೂಲಕ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳು ಉದ್ವಿಗ್ನತೆ ಶಮನಕ್ಕೆ ಮುಂದಾಗಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಹದಿಹರೆಯದವರಲ್ಲಿ ಹಿಂಸಾಚಾರ ಹೆಚ್ಚುತ್ತಿದೆ. ಇದರ ವಿರುದ್ಧ ಆಯೋಗವು ಕಾಲೇಜು ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.
ಜಿಲ್ಲಾಧಿಕಾರಿಗಳ ಕಾನ್ಪರೆನ್ಸ್ ಸಭಾಂಗಣದನ್ಸ್ನಿನ್ನೆ ನಡೆದ ಮಹಿಳಾ ಆಯೋಗದ ಸಭೆಯಲ್ಲಿ ಕೋವಿಡ್ ನಿಯಮಾವಳಿಗೆ ಅನುಗುಣವಾಗಿ 32 ದೂರುಗಳನ್ನು ಪರಿಗಣಿಸಲಾಗಿದೆ. 13 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ನಾಲ್ಕು ದೂರುಗಳ ಕುರಿತು ಪೋಲೀಸರು ವರದಿ ಕೇಳಿದ್ದಾರೆ. ಮುಂದಿನ ಸಭೆಯಲ್ಲಿ 15 ದೂರುಗಳನ್ನು ಪರಿಗಣಿಸಲಾಗುವುದು. ಮಹಿಳಾ ಪೊಲೀಸ್ ಸಿಐ ಭಾನುಮತಿ, ಅಡ್ವ. ರೇಣುಕಾದೇವಿ, ವಕೀಲರಾದ ತಿತಿಮೋಳ್ ಕೆ ಜೂಲಿ ಮತ್ತು ಕುಟುಂಬ ಸಲಹೆಗಾರರಾದ ರಮ್ಯಾಮೋಳ್ ಉಪಸ್ಥಿತರಿದ್ದರು.