ಸಂಜೆ ಕಾಫಿ/ಟೀ ಜೊತೆಗೆ ಏನಾದ್ರೂ ಬಿಸಿಬಿಸಿ ತಿಂಡಿ ಇದ್ರೆ ಎನ್ ಮಜಾ ಅಲ್ವಾ? ಆದರೆ, ಪ್ರತಿನಿತ್ಯ ಏನ್ ಮಾಡೋದು? ಅದೇ ಪಕೋಡಾ, ಬಜ್ಜಿ ತಿಂದು ಬೇಜಾರಾಗಿರುತ್ತೆ, ಏನಾದ್ರೂ ಹೊಸದಾಗಿ ಟ್ರೈ ಮಾಡ್ಬೇಕು ಅಂತ ಯೋಚಿಸ್ತಾನೆ ಇರ್ತಿರಾ. ಅಂತಹವರಿಗಾಗಿ ನಾವಿಂದು ಸುಲಭವಾಗಿ ಬರೀ, ಹದಿನೈದೇ ನಿಮಿಷದಲ್ಲಿ ವಡೆ ಮಾಡೋದನ್ನು ಹೇಳಿಕೊಡ್ತೀವಿ.
ಇದು ಮಾಮೂಲಿ ಉದ್ದಿನ ವಡೆ ಅಲ್ಲ, ಬದಲಾಗಿ ರವೆಯಿಂದ ಮಾಡುವ ಮೃದು ವಡೆ. ಹಾಗಾದ್ರೆ, ಈ ರೆಸಿಪಿ ತಯಾರಿಸೋದು ಹೇಗೆ ಅನ್ನೋದನ್ನ ನೋಡೋಣ.
ಬೇಕಾಗುವ ಪದಾರ್ಥಗಳು:
½ ಟೀಸ್ಪೂನ್ ಉಪ್ಪು
1 ಟೀಸ್ಪೂನ್ ಎಣ್ಣೆ
1½ ಕಪ್ ರವೆ
1 ಟೀಸ್ಪೂನ್ ಜೀರಿಗೆ
½ ಟೀಸ್ಪೂನ್ ಮೆಣಸಿನ ಹುಡಿ
ಕರಿಬೇವಿನ ಎಲೆಗಳು (ಕತ್ತರಿಸಿದ)
2 ಮೆಣಸಿನಕಾಯಿ (ಸಣ್ಣದಾಗಿ ಹೆಚ್ಚಿದ)
2 ಚಮಚ ಕೊತ್ತಂಬರಿ ಸೊಪ್ಪು (ಸಣ್ಣದಾಗಿ ಕೊಚ್ಚಿದ)
2 ಟೀಸ್ಪೂನ್ ನಿಂಬೆ ರಸ
ಎಣ್ಣೆ (ಹುರಿಯಲು)
ತಯಾರಿಸುವ ವಿಧಾನ:
ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 2 ಕಪ್ ನೀರು, ½ ಟೀಸ್ಪೂನ್ ಉಪ್ಪು ಮತ್ತು 1 ಟೀಸ್ಪೂನ್ ಎಣ್ಣೆಯನ್ನು ಹಾಕಿ, ಕುದಿಯಲು ಬಿಡಿ.
ನೀರು ಕುದಿಯಲು ಪ್ರಾರಂಭಿಸಿದ ನಂತರ, 1½ ಕಪ್ ರವಾ ಸೇರಿಸಿ, ನಿರಂತರವಾಗಿ ಬೆರೆಸಿ, ರವೆ ನೀರನ್ನು ಹೀರಿಕೊಳ್ಳುವವರೆಗೆ ಬೆರೆಸಿ.
ಬೇಯಿಸಿದ ರವೆಯನ್ನು ದೊಡ್ಡ ಬಟ್ಟಲಿಗೆ ಹಾಕಿ, ಅದಕ್ಕೆ 1 ಟೀಸ್ಪೂನ್ ಜೀರಿಗೆ, ½ ಟೀಸ್ಪೂನ್ ಮೆಣಸಿನ ಹುಡಿ, ಕರಿಬೇವಿನ ಎಲೆಗಳು, 2 ಮೆಣಸಿನಕಾಯಿ, 2 ಟೀಸ್ಪೂನ್ ಕೊತ್ತಂಬರಿ ಮತ್ತು 2 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಕೈಗೆ ಎಣ್ಣೆ ಹಚ್ಚಿಕೊಂಡು, ಮಿಶ್ರಣದ ಉಂಡೆ ತೆಗೆದುಕೊಂಡು, ವಡೆಯ ಆಕಾರಕ್ಕೆ ತಟ್ಟಿ.
ಈಗ ಬಿಸಿ ಎಣ್ಣೆಯಲ್ಲಿ ವಡೆವನ್ನು ಡೀಪ್ ಫ್ರೈ ಮಾಡಿ, ಗೋಲ್ಡನ್ ಬ್ರೌನ್ ಬೇಯಿಸಿ.
ಅಂತಿಮವಾಗಿ, ಟೊಮೆಟೊ ಸಾಸ್ ಅಥವಾ ಚಟ್ನಿಯೊಂದಿಗೆ ರವೆ ವಡೆಯನ್ನು ಆನಂದಿಸಿ.
- NUTRITIONAL INFORMATION
- ಕ್ಯಾಲೋರಿಗಳು: - 100 ಕೆ.ಕೆ.ಎಲ್
- ಕೊಬ್ಬು: - 1 ಗ್ರಾಂ
- ಪ್ರೋಟೀನ್: - 3 ಗ್ರಾಂ
- ಕಾರ್ಬೋಹೈಡ್ರೇಟ್ಗಳು: - 20 ಗ್ರಾಂ