HEALTH TIPS

ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಪ್ರವೇಶ ಅನುಮತಿ: ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗಲು 1,500 ಜನರಿಗೆ ಅವಕಾಶ; ಕೊರೊನಾ ನಿಯಂತ್ರಣಗಳಲ್ಲಿ ಮತ್ತಷ್ಟು ಸಡಿಲಿಕೆ ಪ್ರಕಟಿಸಿದ ಸರ್ಕಾರ

                                          

                 ತಿರುವನಂತಪುರ: ರಾಜ್ಯದಲ್ಲಿ ಕೊರೊನಾ ಹರಡುವಿಕೆ ಕಡಿಮೆಯಾಗಿರುವುದರಿಂದ, ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ. ಚಿತ್ರಮಂದಿರಗಳು, ಬಾರ್‍ಗಳು, ಕ್ಲಬ್‍ಗಳು ಮತ್ತು ಹೋಟೆಲ್‍ಗಳ ಮೇಲಿನ ನಿರ್ಬಂಧಗಳಲ್ಲಿ ವಿನಾಯಿತಿಗಳನ್ನು ಘೋಷಿಸಲಾಗಿದೆ.

                  ಥಿಯೇಟರ್‍ಗಳು, ಬಾರ್‍ಗಳು, ಕ್ಲಬ್‍ಗಳು, ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು ಮತ್ತು ಇತರ ಕೇಂದ್ರಗಳಲ್ಲಿ ಎಲ್ಲಾ 100 ಪ್ರತಿಶತದಷ್ಟು ಆಸನಗಳಿಗೆ ಅವಕಾಶ ನೀಡಲಾಗಿದೆ.  ಸರ್ಕಾರಿ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಸಭೆಗಳನ್ನು ಆಫ್‍ಲೈನ್‍ನಲ್ಲಿ ನಡೆಸಬಹುದು. ಹೊಸ ವಿನಾಯಿತಿಗಳು ಎಲ್ಲಾ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು 1,500 ಜನರಿಗೆ ಅವಕಾಶ ನೀಡುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆಯ ಆಧಾರದ ಮೇಲೆ ಜಿಲ್ಲೆಗಳನ್ನು ವರ್ಗೀಕರಿಸುವ ಪದ್ಧತಿಯನ್ನೂ ಸರ್ಕಾರ ರದ್ದುಗೊಳಿಸಿದೆ.

                 ರಾಜ್ಯದಲ್ಲಿ ನಿನೆ ಅತಿ ಕಡಿಮೆ, ಎಂದರೆ 2524 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದವು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries