ಮಂಜೇಶ್ವರ: ವಿಶ್ವ ಬ್ರಾಹ್ಮಣ ಸಮುದಾಯದ ಅತ್ಯಂತ ಪ್ರಸಿದ್ದ ದೇವಸ್ಥಾನವಾದ ಬಂಗ್ರಮಂಜೇಶ್ವರ ಶ್ರೀಕಾಳಿಕಾಪರಮೇಶ್ವರಿ ದೇವಾಲಯದ ಬ್ರಹ್ಮಜಕಲಶೋತ್ಸವ ವಿಧಿವಿಧಾನಗಳು ಫೆ.16 ರಿಂದ 20ರ ವರೆಗೆ ಶ್ರೀಮದ್ ಆನೆಗುಂದಿ ಮಹಾಸಂಸ್ಥಾನದ ಶ್ರೀಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ತಂತ್ರಿವರ್ಯ ವೇದಮೂರ್ತಿ ಕೆ.ಉಮೇಶ ತಂತ್ರಿ ಮಂಗಳೂರು ಇವರ ಆಚಾರ್ಯತ್ವದಲ್ಲಿ ಅರ್ಚಕ ಪುರೋಹಿತ ಬ್ರಹ್ಮಶ್ರೀ ಪ್ರಕಾಶ್ಚಂದ್ರ ಶ್ರೌತಿಯವರ ಸಹಭಾಗಿತ್ವದಲ್ಲಿ ಬ್ರಹ್ಮಶ್ರೀ ಎನ್.ಶ್ರೀಧರ ಶರ್ಮ ಕಟಪಾಡಿ ಮತ್ತು ವೈದಿಕ ತಂಡಗಳ ಸಹಕಾರದಲ್ಲಿ ನಡೆಯಲಿದೆ ಎಂದು ಶ್ರೀಕ್ಷೇತ್ರದ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಶ್ರೀಕ್ಷೇತ್ರದಲ್ಲಿ ಶನಿವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ 16 ರಂದು ವೈದಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಶ್ರೀರಕ್ಷೆಗೆ ಮಣ್ಯಾಹ ಸಂಕಲ್ಪ, ರಾತ್ರಿ ಲಕ್ಷ್ಮೀನೃಸಿಂಹ ಸುದರ್ಶನ ಮಹಾಶಾಂತಿ, ಅಘೋರಾಸ್ತ್ರ ಹವನ, ಪೂಜೆ ಪೂರ್ಣಾಹುತಿ ನಡೆಯಲಿದೆ.
ಫೆ. 17 ರಮದು ಗುರುವಾರ ಪೂರ್ವಾಹ್ನ ತಂತ್ರಿಗಳ ಹಾಗೂ ಋತ್ವಿಜರ ಆಗಮನ, ಸ್ವಾಗತ, ಫಲನ್ಯಾಸ ಪೂರ್ವಕ ದೇವತಾ ಪ್ರಾರ್ಥನೆ, ತೋರಣ ಮಹೂರ್ತ, ತಂತಿ ವರಣ- ಆಚಾರ್ಯ ವರಣ, ಮಹಾ ಸಂಕಲ್ಪ, ಗುರುಗಣೇಶ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಆದ್ಯಗಣ ಹೋಮ, ಬ್ರಹ್ಮಕೂರ್ಚ ಹೋಮ, ತಂಬಿಲ, ಮಧ್ಯಾಹ್ನ ಮಹಾಪೂಜೆ, ಸಂಜೆ ಉಗ್ರಾಣ ಪೂಜೆ, ಹಸಿರುವಾಣಿ, ದಿನಾ ಹೋಮ, ವಸಂತ ಮಂಟಪ ಪ್ರಾಕಾರ ಶುದ್ಧಿ, ರಾಕ್ಷೋಘ್ನ, ಶ್ರೀ ವಾಸ್ತುಬಲಿ, ಕೌತುಕ ಬಂಧನ, ಅಂಕುರಾರ್ಪಣೆ, ಪಾರಾಯಣ, ರಾತ್ರಿ ಮಹಾಪೂಜೆ ನಡೆಯಲಿದೆ.
ಅಪರಾಹ್ನ 3.30ಕ್ಕೆ ಮಂಜೇಶ್ವರ ಶ್ರೀ ಮದನಂತೇಶ್ವರ ಕ್ಷೇತ್ರದಿಂದ ಹೊರಟು, ಮಂಜೇಶ್ವರ ಪೇಟೆ ಅಯ್ಯಪ್ಪ ಮಂದಿರ ದಾರಿಯಾಗಿ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಸಂಜೆ 6.30 ರಿಂದ ಭರತನಾಟ್ಯ ಗುರುಗಳಾದ ಬಾಲಕೃಷ್ಣ ಮಂಜೇಶ್ವರ ಶಿಷ್ಯವೃಂದದವರಿಂದ ನಾಟ್ಯ ವೈಭವ ನಡೆಯಲಿದೆ.
ಫೆ.18 ರಂದು ಪೂರ್ವಾಹ್ನ 9 ರಿಂದ 11ರ ವರೆಗೆ ಭಜನಾ ಸಂಕೀರ್ತನ ಸೇವೆ ನಡೆಯಲಿದೆ. 10 ಕ್ಕೆ ಪರಮಪೂಜ್ಯ ಜಗದ್ಗುರುಗಳವರಿಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ. ವೈದಿಕ ಕಾರ್ಯಕ್ರಮಗಳ ಭಾಗವಾಗಿ ಪೂರ್ವಾಹ್ನ ಪವಮಾನ ಶಾಂತಿ, ಭೂವರಾಹ ಯಜ್ಞ, ರುದ್ರ ಹೋಮ, ಪೂಜೆ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, ಸಂತರ್ಪಣೆ, ಗೋಪೂಜೆ, ಗೋಗ್ರಾಸ, ಸಂಜೆ ಮಂಟಪ ಸಂಸ್ಕಾರ, ಪಂಚದುರ್ಗಾಪರಮೇಶ್ವರಿ ದೀಪ ಸ್ಥಾಪನಾ ಪೂರ್ವಕ ಯಂತ್ರೋದ್ಧಾರ, ನಮಸ್ಕಾರ, ಶ್ರೀ ಕಾಳಿಕಾ ದಶಸಹಸ್ರನಾಮಾರ್ಚನೆ, ಸಪ್ತಶತೀ ಪಾರಾಯಣ, ಪೂಜೆ, ರಾತ್ರಿ ಮಹಾಪೂಜೆ ನಡೆಯಲಿದೆ.
ಅಪರಾಹ್ನ 3 ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ಆನೆಗುಂದಿ ಶ್ರೀಗಳು ದೀಪ ಪ್ರಜ್ವಲನೆಗೈದು ಆಶೀರ್ವಚನ ನೀಡುವರು. ಶ್ರೀಕಾಳಿಕಾಪರಮೇಶವರಿ ವಿಶ್ವಕರ್ಮ ಸಮಾಜ ಸಭಾದ ಅ|ಧ್ಯಕ್ಷ ಪೋಳ್ಯ ಎಂ.ಉಮೇಶ ಆಚಾರ್ಯ ಅಧ್ಯಕ್ಷತೆ ವಹಿಸುವರು. ಶ್ರೀಕ್ಷೇತ್ರದ ತಂತ್ರಿವರ್ಯ ಕೆ.ಉಮೇಶ ತಂತ್ರಿ, ಬಡಾಜೆಬೂಡು ಗೋಪಾಲಕೃಷ್ಣ ತಂತ್ರಿ ಉಪಸ್ಥಿತರಿರುವರು. ಶಂಕರಾಚಾರ್ಯ ಕಡ್ಲಾಸ್ಕರ್ ಹುಬ್ಬಳ್ಳಿ ಧಾರ್ಮಿಕ ಉಪನ್ಯಾಸ ನೀಡುವರು.
ಜನಾರ್ಧನ ಆಚಾರ್ಯ ಕುಂಬಳೆ, ವಡೇರಹೋಬಳಿ ಶ್ರೀಧರ ಆಚಾರ್ಯ, ಕೆ.ಕೇಶವ ಆಚಾರ್ಯ, ಎನ್.ಪರಮೇಶ್ವರ ಆಚಾರ್ಯ ನೀರ್ಚಾಲು, ನ್ಯಾಯವಾದಿ ರಾಜೇಶ್ ಆಚಾರ್ಯ ತಾಳಿಪಡ್ಪು, ಸುಂದರ ಆಚಾರ್ಯ ಕೋಟೆಕಾರು, ರಾಘವ ಆಚಾರ್ಯ ಪುತ್ತೂರು ಉಪಸ್ಥಿತರಿರುವರು. ರಾಜ ಬೆಳ್ಚಡ ಮಾಡ, ಪೋಲೀಸ್ ಕಮಿಷನರ್ ಎನ್.ಶಶಿಕುಮಾರ್, ಛತ್ರಪತಿ ಪ್ರಭು, ಶಂಕರನಾರಾಯಣ ಹೊಳ್ಳ, ಕಾಕುಂಜೆ ಬಲರಾಮ ಭಟ್, ಪದ್ಮನಾಭ ಕಡಪ್ಪರ, ಭಾಸ್ಕರ ಶೆಟ್ಟಿಗಾರ ಉದ್ಯಾವರ, ನಾರಾಯಣ, ಚಂದ್ರಹಾಸ ಗುರಿಕ್ಕಾರ್, ತುಕರಾಮ ಕುಂಬಳೆ, ಗೋಪಾಲ ಶೆಟ್ಟಿ ಅರಿಬೈಲು, ಹರೀಶ್ ಶೆಟ್ಟಿ ಮಾಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭ ಕೋಟೆಮನೆ ವೆಂಕಟರಮಣ ಆಚಾರ್ಯ, ಪೋಳ್ಯ ಸೀತಾರಾಮ ಆಚಾರ್ಯ, ಭರತ್ ರಾಜ್ ಆಚಾರ್ಯ ಕೊಂಡೆವೂರು, ಪೂರ್ಣಿಮ ಯೋಗೇಂದ್ರ ಆಚಾರ್ಯ ಬೊಳ್ಳಾರು, ವಿಲಾಸ್ ಮತ್ತು ಗಣೇಶ್ ಆಚಾರ್ಯ ಗುಡ್ಡೆಮನೆ ಅವರನ್ನು ಗೌರವಿಸಲಾಗುವುದು.
ರಾತ್ರಿ 830 ರಿಂದ ಕಟೀಲ್ದಪ್ಪೆ ಭಕ್ತೆರ್ ಹೊಸಂಗಡಿ ಪ್ರಾಯೋಜಕತ್ವದಲ್ಲಿ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಫೆ.19 ರಂದು ಬೆಳಿಗ್ಗೆ 9 ರಿಂದ 11ರ ವರೆಗೆ ಭಜನೆ, ವೈದಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ವಿಧಿವಿಧಾನಗಳು ನಡೆಯಲಿದೆ. 10.30ಕ್ಕೆ ಆನೆಗುಂದಿ ಶ್ರೀಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು ಮಹಿಳಾ ಸಂಘದ ಅಧ್ಯಕ್ಷೆ ವನಿತಾ ತುಕಾರಾಮ ಆಚಾರ್ಯ ಕೊಂಡೆವೂರು ಅಧ್ಯಕ್ಷತೆ ವಹಿಸುವರು. ಮಾತೋಶ್ರೀ ಸರಳಮ್ಮ ಗುರುನಾಥ ಸ್ವಾಮೀಜಿ |ಶಿಕಾರಿಪುರ ದಿವ್ಯ ಉಪಸ್ಥಿತರಿರುವರು. ಹೇವಲತಾ ಎನ್ ಸ್ವಾಮೀಜಿ ಶಿಕಾರಿಪುರ, ಸಂಧ್ಯಾ ಲಕ್ಷಣ ಆಚಾರ್ಯ ಉಡುಪಿ, ಕನಕ ಪ್ರಭಾಕರ ಆಚಾರ್ಯ ಕೋಟೆಕಾರು, ಜಯಂತಿ ವಾಸುದೇವ ಆಚಾರ್ಯ ಕಾಟುಕುಕ್ಕೆ, ಕುಂಬಳೆ, ಸುಶೀಲ ಮಾಧವ ಆಚಾರ್ಯ, ಚೆನ್ನಿಕರೆ ಕಾಸರಗೋಡು ಉಪಸ್ಥಿತರಿರುವರು.
ಅಪರಾಹ್ನ 3.30 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಕೇಶವ ಆಚಾರ್ಯ ಹಾಗೂ ಶಶಿರೇವಿ ದಂಪತಿಯರ ಪುತ್ರಿಯರಾದ ಕುಮಾರಿ ಗಾಯತ್ರಿ ಮತ್ತು ಕುಮಾರಿ ಶಾವಣ್ಯ ಕೊಂಡವೂರು ಇವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ.
ಫೆ. 20 ರಂದು ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಪೂರ್ವಾಹ್ನ 8-10ರಿಂದ 9-10ರ ನಡುವೆ ಸುಮುಹೂರ್ತದಲ್ಲಿ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಲಿದೆ. 11 ಕ್ಕೆ ಆನೆಗುಂದಿ ಶ್ರೀಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು ಪೋಳ್ಯ ಎಂ ಉಮೇಶ ಆಚಾರ್ಯ ಅಧ್ಯಕ್ಷತೆ ವಹಿಸುವರು. ಕಣ್ಣಪ್ಪ ಎನ್ ಆಚಾರ್ಯ, ಶ್ರೀಧರ ಆಚಾರ್ಯ ಮುಂಬಯಿ, ಶೇಖರ ಆಚಾರ್ಯ ಕಾಪು, ಸುಧಾಕರ ಆಚಾರ್ಯ ಕೊಲಕಾಡಿ, ಜಯಕರ ಆಚಾರ್ಯ, ಶಿಲ್ಪಿ ರಾಮಚಂದ್ರ ಆಚಾರ್ಯ, ಮಧುಕರ ಚಂದ್ರಶೇಖರ ಆಚಾರ್ಯ, ಬಿ.ಭಾಸ್ಕರ ಆಚಾರ್ಯ, ಚಂದ್ರಯ್ಯ ಆಚಾರ್ಯ ಕಳಿ, ನವೀನ್ ಆಚಾರ್ಯ ಪಡುಬಿದ್ರೆ, ಪುರುಷೋತ್ತಮ ಆಚಾರ್ಯ ಕಾಞಂಗಾಡ್, ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಪದ್ಮನಾಭ ಶರ್ಮ ಉಪಸ್ಥಿತರಿರುವರು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶಶಿಧರ ಶೆಟ್ಟಿ, ಜಮ್ಮದಮನೆ, ಎಂ.ಬಿ.ಲೋಕೇಶ್ ಆಚಾರ್ಯ ಕಂಬಾರು, ತ್ರಾಸಿ ಸುಧಾಕರ ಆಚಾರ್ಯ, ರೂಪೇಶ್ ಆಚಾರ್ಯ ತ್ರಾಸಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಅಪರಾಹ್ನ 3.30 ರಿಂದ ಕಾವೀಃ ಯಕ್ಷ ಬಳಗ ವರ್ಕಾಡಿಯವರಿಂದ ದೇವಶಿಲ್ಪಿ ವಿಶ್ವಕರ್ಮ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 5 ರಿಂದ ಉಯ್ಯಾಲೆ ಜಾನಪದ ನೃತ್ಯ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಕೆ.ಎಂ.ಗಂಗಾಧರ ಆಚಾರ್ಯ ಕೊಂಡೆವೂರು ಮಾಹಿತಿ ನೀಡಿದರು ಬಿ.ಪದ್ಮನಾಭ ಆಚಾರ್ಯ ಪ್ರತಾಪನಗರ, ಎಂ.ವೆಂಕಟರಮಣ ಆಚಾರ್ಯ ಮುಳಿಗದ್ದೆ, ಯು.ಅಶೋಕ ಆಚಾರ್ಯ ಉದ್ಯಾವರ, ಗೌರವಾಧ್ಯಕ್ಷ ಕೆ.ಜನಾರ್ಧನ ಆಚಾರ್ಯ ಕುಂಬಳೆ, ಅಧ್ಯಕ್ಷ ಪೋಳ್ಯ ಎಂ.ಉಮೇಶ ಆಚಾರ್ಯ, ಗೌರವ ಕಾರ್ಯದರ್ಶಿ ಭಾಸ್ಕರ ಆಚಾರ್ಯ ಪ್ರತಾಪನಗರ, ಪ್ರಧಾನ ಕಾರ್ಯದರ್ಶಿ ನಾಗರಾಜ ಆಚಾರ್ಯ ಕಾಸರಗೋಡು, ಕೋಶಾಧಿಕಾರಿ ವೆಂಕಟ್ರಮಣ ಆಚಾರ್ಯ ಉಳುವಾರು, ಬಿ.ಎಂ.ಮೋಹನಚಂದ್ರ ಆಚಾರ್ಯ, ತಾರಾನಾಥ ಆಚಾರ್ಯ ಉಪಸ್ಥಿತರಿದ್ದರು.