ಮುಂಬೈ: ನಿನ್ನೆಯ ವಹಿವಾಟಿನಲ್ಲಿ ಭಾರೀ ನಷ್ಟ ಅನುಭವಿಸಿದ ಸೂಚ್ಯಂಕಗಳು ಇಂದು ಏರುಗತಿಯಲ್ಲಿವೆ. ನಿಫ್ಟಿ 17,300ಕ್ಕೆ ಮುಕ್ತಾಯವಾಯಿತು.
ಸೆನ್ಸೆಕ್ಸ್ 254 ಅಂಕಗಳ ಏರಿಕೆಯೊಂದಿಗೆ 57,875ಕ್ಕೆ ಮತ್ತು ನಿಫ್ಟಿ 76 ಅಂಕಗಳ ಏರಿಕೆಯೊಂದಿಗೆ 17,290ಕ್ಕೆ ತಲುಪಿದೆ. ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ಅಲ್ಪ ಕುಸಿತ ಮತ್ತು ಚಿಲ್ಲರೆ ಹೂಡಿಕೆದಾರರ ಆಸಕ್ತಿ ಮಾರುಕಟ್ಟೆಯ ಲಾಭಕ್ಕೆ ಪ್ರಮುಖ ಕಾರಣಗಳಾಗಿವೆ.
ಮಾರುತಿ ಸುಜುಕಿ, ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಹೀರೋ ಮೋಟರ್‌ಕಾರ್ಪ್ ಪ್ರಮುಖ ಲಾಭ ಗಳಿಸಿದವು.
ಡಿವೈಸ್ ಲ್ಯಾಬ್, ಎಚ್‌ಡಿಎಫ್‌ಸಿ, ನೆಸ್ಲೆ, ಬ್ರಿಟಾನಿಯಾ ಮತ್ತು ಎಸ್‌ಬಿಐ ಲೈಫ್ ಇನ್ಶುರೆನ್ಸ್ ಸೇರಿದಂತೆ ಇತರರ ವ್ಯವಹಾರ ಕುಸಿತ ಕಂಡಿದೆ
ಬಿಎಸ್‌ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಶೇ.0.50ರಷ್ಟು ಏರಿಕೆ ಕಂಡಿವೆ.