ತಿರುವನಂತಪುರ: ಫೆ.17ರಂದು ಅಟ್ಟುಕ್ಕಾಲ್ ಪೊಂಗಾಲ ನಡೆಯಲಿದೆ. ಪೊಂಗಾಲ ತರ್ಪಣವು ಕೊರೊನಾ ಮಾನದಂಡಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ. 10.50ಕ್ಕೆ ಭಂಡಾರ ಒಲೆಗೆ ಅಗ್ನಿಸ್ಪರ್ಶ ಮಾಡಲಾಗುವುದು. ದೇವಸ್ಥಾನದ ಆವರಣದಲ್ಲಿ ಪೊಂಗಾಲ ಹಾಕುವಂತಿಲ್ಲ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ಭಕ್ತರು ತಮ್ಮ ಮನೆಗಳಲ್ಲಿ ಪೊಂಗಾಲ ಇರಿಸಬಹುದು. ಪೊಂಗಾಲ ಮಾಡಲು 1500 ಮಂದಿಗೆ ರಿಯಾಯ್ತಿ ನೀಡಿದ್ದರೂ ಸರಕಾರದ ನಿಯಮಾವಳಿ ಪ್ರಕಾರ 1500 ಮಂದಿಯನ್ನು ಆಯ್ಕೆ ಮಾಡುವುದು ಪ್ರಾಯೋಗಿಕವಾಗಿಲ್ಲ ಎನ್ನುತ್ತಾರೆ ದೇವಸ್ಥಾನದ ಅಧಿಕಾರಿಗಳು.
ಮಧ್ಯಾಹ್ನ 1.30ಕ್ಕೆ ಪೊಂಗಾಲ ಅರ್ಪಿಸಲಾಗುವುದು. ಇದಕ್ಕಾಗ ದೇವಸ್ಥಾನದಿಂದ ವಿಶೇಷ ಅರ್ಚಕರನ್ನು ನೇಮಿಸಿಲ್ಲ. ಭಂಡಾರ ಒಲೆಯಲ್ಲಿ ಮಾತ್ರ ಸೇವೆ ನಡೆಯಲಿದೆ. ಯಾವುದೇ ವಿಧಿವಿಧಾನಗಳು ಅಥವಾ ಪುಷ್ಪಾರ್ಚನೆ ಇರುವುದಿಲ್ಲ ಎಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಜಿಲ್ಲಾಡಳಿತದ ಆದೇಶವನ್ನು ಪಾಲಿಸಬೇಕು ಎಂದು ಪದಾಧಿಕಾರಿಗಳು ತಿಳಿಸಿದರು.
ದೇವಸ್ಥಾನಕ್ಕೆ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ ಅನುಮತಿ ನೀಡಲಾಗಿದೆ. ಭೇಟಿ ನೀಡುವ ಭಕ್ತರು 72 ಗಂಟೆಗಳ ಒಳಗೆ RTPCR ಋಣಾತ್ಮಕ ಪ್ರಮಾಣಪತ್ರವನ್ನು ಅಥವಾ ಮೂರು ತಿಂಗಳೊಳಗೆ ಕೊರೋನಾ ಸಕಾರಾತ್ಮಕತೆಯ ಪುರಾವೆಯನ್ನು ಸಲ್ಲಿಸಬೇಕಾಗುತ್ತದೆ. ರೋಗಿಗಳಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ. ದೇವಾಲಯದ ಒಳಗೆ ಮತ್ತು ಸುತ್ತಲೂ ಕೊರೋನಾ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ದೇವಾಲಯದ ಟ್ರಸ್ಟ್ ಅಧಿಕಾರಿಗಳು ಸ್ವಯಂಸೇವಕರು ಮತ್ತು ಸಂಘಟಕರಿಗೆ ಸೂಚನೆ ನೀಡಿರುವರು.