ಮುಳ್ಳೇರಿಯ: ಕಾರಡ್ಕ ಗ್ರಾಮ ಪಂಚಾಯತಿ 6ನೇ ವಾರ್ಡ್ ನ 17ನೇ ಮೈಲ್- ಮಲ್ಲಾವರ ದೇಗುಲಕ್ಕೆ ಬರುವ ರಸ್ತೆಗೆ 2021-22ನೇ ಆರ್ಥಿಕ ವರ್ಷದ ಅಭಿವೃದ್ಧಿ ಪದ್ಧತಿಯಲ್ಲಿ ಒಳಪಡಿಸಿ ಕಾಂಕ್ರೀಟ್ ಕಾಮಗಾರಿ ಗೆ ಫಂಡ್ ಮಂಜೂರುಗೊಳಿಸಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಕಾರಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ನ್ಯಾಯವಾದಿ ಗೋಪಾಲಕೃಷ್ಣ ಕೆ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜನನಿ ವಹಿಸಿದ್ದರು. ಸಮಾರಂಭದಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷ ರತ್ನಾಕರ ಎಂ., ಸದಸ್ಯರಾದ ಸಂತೋಷ್ ಸಿ.ಎನ್. ಸಿ. ಡಿ. ಎಸ್.ಚೇರ್ ಪರ್ಸನ್ ಸವಿತಾ ನಾರಾಯಣ, ಮಲ್ಲಾವರ ದೇಗುಲ ಸೇವಾ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಬಲ್ಲಾಳ್, ಮಲ್ಲಾವರ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಗೋಪಾಲ ಕೆ ಉಪಸ್ಥಿತರಿದ್ದರು. ಭಾಸ್ಕರ ಎ ಮಲ್ಲಾವರ ಸ್ವಾಗತಿಸಿ, ಚಂದ್ರಾವತಿ ವಂದಿಸಿದರು.