ನವದೆಹಲಿ: ಉಕ್ರೇನ್ ಅಂತಾರಾಷ್ಟ್ರೀಯ ವಿಮಾನ(UIA) ಇಂದು ಗುರುವಾರ ಬೆಳಗ್ಗೆ 7.45ರ ಸುಮಾರಿಗೆ ದೆಹಲಿಗೆ ಉಕ್ರೇನ್ ನಿಂದ 182 ಭಾರತೀಯರನ್ನು ಹೊತ್ತು ಬಂದಿಳಿದಿದೆ. ಅವರಲ್ಲಿ ಬಹುತೇಕರು ವಿದ್ಯಾರ್ಥಿಗಳು.
ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ದಾಳಿಯ ಹಿನ್ನೆಲೆಯಲ್ಲಿ ಬಿಕ್ಕಟ್ಟು ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಹಲವು ವಿಶೇಷ ವಿಮಾನಗಳು ವಿಶೇಷ ವಾಯುಯಾನವನ್ನು ನಡೆಸುತ್ತಿದ್ದು ಅವುಗಳಲ್ಲಿ ಏರ್ ಇಂಡಿಯಾ ಕೂಡ ಸೇರಿದೆ, ಭಾರತೀಯರನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ಕರೆತರುವ ಪ್ರಯತ್ನದಲ್ಲಿ ತೊಡಗಿದೆ.
ಉಕ್ರೇನ್‌ನಿಂದ 182 ಭಾರತೀಯರೊಂದಿಗೆ ವಿಶೇಷ UIA ವಿಮಾನ ದೆಹಲಿಗೆ ಬಂದಿಳಿಯಿತು ಎಂದು ಹೆಸರು ಹೇಳಲಿಚ್ಛಿಸದ ಉಕ್ರೇನ್ ನ ಅಂತಾರಾಷ್ಟ್ರೀಯ ವಿಮಾನಯಾನದ ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್ ನ ಕೈವ್ ನಿಂದ ಮೊದಲ ಬಾರಿಗೆ ಯಶಸ್ವಿಯಾಗಿ ಭಾರತೀಯರನ್ನು ಕರೆತರಲಾಗಿದೆ. ಅವರಲ್ಲಿ ಉಕ್ರೇನ್ ನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ ಭಾರತೀಯರು ಸೇರಿದ್ದಾರೆ ಎಂದು ಭಾರತದ ಉಕ್ರೇನ್ ಪ್ರತಿನಿಧಿ ತಿಳಿಸಿದ್ದಾರೆ.
ನಾನು ವಾಸಿಸುತ್ತಿದ್ದ ಸ್ಥಳವು ಉಕ್ರೇನ್-ರಷ್ಯಾ ಗಡಿಭಾಗದಿಂದ ದೂರವಿರುವುದರಿಂದ ಅಲ್ಲಿ ಪರಿಸ್ಥಿತಿ ಸಹಜವಾಗಿತ್ತು. ಆದರೆ ನಮಗೆ ಅಲ್ಲಿರಲು ಸುರಕ್ಷಿತವಲ್ಲ ಎಂದು ರಾಯಭಾರಿಗಳು ಭಾರತಕ್ಕೆ ಬರಲು ಹೇಳಿದರು. ವಿದೇಶಾಂಗ ಸಚಿವಾಲಯದ ಸಲಹೆ ಮೇರೆಗೆ ನಾವು ಬಂದಿದ್ದೇವೆ ಎಂದು ಉಕ್ರೇನ್ ನಲ್ಲಿ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿನಿ ಹೇಳುತ್ತಾರೆ.
30 ದಿನಗಳ ಕಾಲ ಉಕ್ರೇನ್ ನಲ್ಲಿ ತುರ್ತು ಪರಿಸ್ಥಿತಿ ಇರುತ್ತದೆ ಎಂದು ನಮಗೆ ಸಂದೇಶ ಬಂತು. ಹೀಗಾಗಿ ನಾವು ಭಾರತಕ್ಕೆ ಬಂದಿದ್ದೇವೆ ಎಂದು ಮತ್ತೊಬ್ಬ ವಿದ್ಯಾರ್ಥಿ ಹೇಳುತ್ತಾರೆ.