HEALTH TIPS

ರಾಜ್ಯದಲ್ಲಿ ಇಂದು 18,420 ಮಂದಿ ಜನರಿಗೆ ಕೋವಿಡ್ ಪತ್ತೆ: TPR 22.30 ಶೇ.


        ತಿರುವನಂತಪುರ: ಕೇರಳದಲ್ಲಿ ಇಂದು 18,420 ಮಂದಿಗೆ ಕೋವಿಡ್ ಪತ್ತೆಯಾಗಿದೆ.ಎರ್ನಾಕುಳಂ 3012, ತಿರುವನಂತಪುರ 1999, ಕೊಟ್ಟಾಯಂ 1749, ಕೊಲ್ಲಂ 1656, ತ್ರಿಶೂರ್ 1532, ಕೋಝಿಕ್ಕೋಡ್ 1477, ಮಲಪ್ಪುರಂ 1234, ಇಡುಕ್ಕಿ 1091, ಆಲಪ್ಪುಳ 1025, ಪತ್ತನಂತಿಟ್ಟ 972, ಕಣ್ಣೂರು 950, ಪಾಲಕ್ಕಾಡ್ 858, ವಯನಾಡ್ 638, ಕಾಸರಗೋಡು 227 ಎಂಬಂತೆ ಕೋವಿಡ್ ಪತ್ತೆಯಾಗಿದೆ.
       ಕಳೆದ 24 ಗಂಟೆಗಳಲ್ಲಿ 82,575 ಮಾದರಿಗಳನ್ನು ಪರೀಕ್ಷಿಸಲಾಗಿದೆ.  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,88,601 ಮಂದಿ ಜನರು ನಿಗಾದಲ್ಲಿದ್ದಾರೆ.  ಇವರಲ್ಲಿ 3,80,753 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 7,848 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ.  ಒಟ್ಟು 1205 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
         ಪ್ರಸ್ತುತ, 2,32,980 ಕೋವಿಡ್ ಪ್ರಕರಣಗಳಲ್ಲಿ, ಕೇವಲ 3.4 ಶೇಕಡಾ ಜನರು  ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇಂದು TPR 22.30 ಶೇ. ದಾಖಲಾಗಿದೆ.
        ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 20 ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳ ವಿಳಂಬದಿಂದ 168 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 153 ಸಾವುಗಳು ವರದಿಯಾಗಿವೆ.  ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 61,134ಕ್ಕೆ ಏರಿಕೆಯಾಗಿದೆ.
       ಇಂದು ಸೋಂಕು ಪತ್ತೆಯಾದವರಲ್ಲಿ 107 ಮಂದಿ ಹೊರ ರಾಜ್ಯದವರು.  ಸಂಪರ್ಕದ ಮೂಲಕ 17,048 ಮಂದಿ ಜನರು ಸೋಂಕಿಗೆ ಒಳಗಾಗಿದ್ದಾರೆ.  1114 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.  ಒಟ್ಟು 151 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋಅ
ವಿಡ್ ದೃಢಪಡಿಸಲಾಗಿದೆ.
       ಇಂದು ಒಟ್ಟು 43,286 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 3778, ಕೊಲ್ಲಂ 2919, ಪತ್ತನಂತಿಟ್ಟು 1098, ಆಲಪ್ಪುಳ 2969, ಕೊಟ್ಟಾಯಂ 3837, ಇಡುಕ್ಕಿ 1458, ಎರ್ನಾಕುಳಂ 9691, ತ್ರಿಶೂರ್ 5283, ಪಾಲಕ್ಕಾಡ್ 2539, ಮಲಪ್ಪುರಂ 3068, ಕೋಝಿಕ್ಕೋಡ್ 2827, ವಯನಾಡ್ 1579, ಕಣ್ಣೂರು 1670, ಕಾಸರಗೋಡು 670 ಎಂಬಂತೆ ಗುಣಮುಖರಾಗಿದ್ದಾರೆ.
        ಇದರೊಂದಿಗೆ 2,32,980 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದುವರೆಗೆ 60,70,170 ಮಂದಿ ಜನರು ಕೊರೊನಾದಿಂದ ಮುಕ್ತರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries