ನವದೆಹಲಿ: ಕಳೆದ 24 ಗಂಟೆಗಳಲ್ಲಿ 7 ಲಕ್ಷ ಡೋಸ್ ಡೋಸ್ ಕೊರೋನಾ ಲಸಿಕೆ ನೀಡುವುದರೊಂದಿಗೆ ದೇಶದಲ್ಲಿ ಒಟ್ಟಾರೇ 175. 46 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಸೋಮವಾರ ಬೆಳಗ್ಗೆ ಏಳು ಗಂಟೆಯವರೆಗಿನ ತಾತ್ಕಾಲಿಕ ವರದಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 7,00,706 ಡೋಸ್ ಲಸಿಕೆ ನೀಡುವುದರೊಂದಿಗೆ ಒಟ್ಟಾರೇ, 175,46,25,710 ಡೋಸ್ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 1,98,99,635 ಸೆಷನ್ಸ್ ಗಳಲ್ಲಿ ಈ ಗುರಿ ಸಾಧನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಇಲ್ಲಿವರೆಗೂ ಆರೋಗ್ಯ ಕಾರ್ಯಕರ್ತರು 1,04,00,693 ಮೊದಲ ಡೋಸ್ ಹಾಗೂ 99,52,973 ಡೋಸ್ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಮುಂಚೂಣಿ ಕಾರ್ಯಕರ್ತರಿಗೆ 1,84,07,927 ಮೊದಲ ಡೋಸ್ ಹಾಗೂ 1,74,18,259 ಎರಡನೇ ಡೋಸ್ ಲಸಿಕೆ ನೀಡುವುದರೊಂದಿಗೆ ಇಲ್ಲಿಯವರೆಗೂ ಒಟ್ಟಾರೇ, 175, 46,25,710 ಡೋಸ್ ಲಸಿಕೆ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.