HEALTH TIPS

ನಾಲ್ಕು ವಾರಗಳ ಸ್ಥಿರತೆಯ ಬಳಿಕವಷ್ಟೇ ಕೋವಿಡ್-19 ಎಂಡೆಮಿಕ್ ಎಂದು ಹೇಳಬಹುದು: ವೈರಾಲಜಿಸ್ಟ್ ಜಾಕೋಬ್ ಜಾನ್

     ನವದೆಹಲಿ: ಭಾರತದಲ್ಲಿ ದೈನಂದಿನ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಹಾಗಾದರೆ ಇನ್ನೇನು ಮೂರನೇ ಅಲೆ ಮುಕ್ತಾಯದೊಂದಿಗೆ ಕೋವಿಡ್-19 ಕಥೆಯೂ ಮುಗಿದೇ ಹೋಯ್ತು ಎನ್ನುವಂತಹ ಸಕಾರಾತ್ಮಕ ವಾತಾವರಣ ಕಾಣುತ್ತಿದೆ. 

     ಈ ಬೆಳವಣಿಗೆಗಳ ಬಗ್ಗೆ ಭಾರತದ ಖ್ಯಾತ ವೈರಾಲಜಿಸ್ಟ್ ಜಾಕೋಬ್ ಜಾನ್ ಮಾತನಾಡಿದ್ದು, ಭಾರತದಲ್ಲಿ ಕೋವಿಡ್-19 ಸೋಂಕು ಸಂಖ್ಯೆಗಳು ಸತತ 4 ವಾರಗಳ ಕಾಲ ಇಳಿಕೆಯ ಹಾದಿಯಲ್ಲೇ ಇದ್ದರಷ್ಟೇ ಅದನ್ನು ಎಂಡೆಮಿಕ್ ಹಂತದಲ್ಲಿದೆ ಎಂದು ಪರಿಗಣಿಸಬಹುದು ಎಂದು ಹೇಳಿದ್ದಾರೆ. 

     ಸಣ್ಣಪುಟ್ಟ ಏರುಪೇರುಗಳಿಂದ ಕೋವಿಡ್-19 ಎಂಡೆಮಿಕ್ ಹಂತ ತಲುಪಿದೆ ಎನ್ನಲು ಸಾಧ್ಯವಿಲ್ಲ. ಕೋವಿಡ್-19 ಎಂಡೆಮಿಕ್ ಹಂತ ತಲುಪಿದರೂ ಅದರಿಂದ ಹೊರಬರಲು ಹಲವು ತಿಂಗಳುಗಳೇ ಬೇಕು ಹಾಗೂ ಓಮಿಕ್ರಾನ್, ಡೇಲ್ಟಾಗಿಂತಲೂ ಹೆಚ್ಚು ಪ್ರಸರಣ ವೇಗ, ಮಾರಕವಾದ ರೂಪಾಂತರಿ ವೈರಾಣು ಹುಟ್ಟಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಜಾಕೋಬ್ ಜಾನ್ ಅಭಿಪ್ರಾಯಪಟ್ಟಿದ್ದಾರೆ. 

    ಜ.21 ರಿಂದ ಕೋವಿಡ್-19 ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಇಳಿಮುಖವಾಗುತ್ತಿದ್ದು, ಇಂದಿನ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆ ಇದ್ದು ಸತತ 9 ನೇ ದಿನ ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries