HEALTH TIPS

ಭಾರತದ 19 ಲಕ್ಷ ಮಕ್ಕಳ ಪೋಷಕರು ಕೋವಿಡ್ ಗೆ ಬಲಿ: ವಿಶ್ವದಲ್ಲೇ ಅತ್ಯಧಿಕ

                 ನವದೆಹಲಿ:ಒಮೈಕ್ರಾನ್ ಪ್ರಬೇಧದ ಕೋವಿಡ್-19 ಸೋಂಕು ಭಾರತದಲ್ಲಿ ಇಳಿಮುಖವಾಗುತ್ತಿದ್ದರೂ, ದೇಶದಲ್ಲಿ ಈ ಮಾರಕ ಸಾಂಕ್ರಾಮಿಕಕ್ಕೆ 19.2 ಲಕ್ಷ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂಬ ಆತಂಕಕಾರಿ ಅಂಕಿ ಅಂಶಗಳನ್ನು ಲ್ಯಾನ್ಸೆಟ್ ಬಿಡುಗಡೆ ಮಾಡಿದೆ. ಇದು ವಿಶ್ವದಲ್ಲೇ ಅತ್ಯಧಿಕ ಎಂದು ಲ್ಯಾನ್ಸೆಟ್ ವರದಿ ವಿವರಿಸಿದೆ.

            2020ರ ಮಾರ್ಚ್ ನಿಂದ 2021ರ ಅಕ್ಟೋಬರ್ ನಡುವಿನ 20 ತಿಂಗಳ ಅವಧಿಯಲ್ಲಿ ಈ ಮಕ್ಕಳು ತಮ್ಮ ಒಬ್ಬ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ. ಹಲವು ಕುಟುಂಬಗಳು ಈ ಸಾಂಕ್ರಾಮಿಕದಿಂದ ನಾಮಾವಶೇಷವಾಗಿವೆ ಎಂದು ಲ್ಯಾನ್ಸೆಟ್ ಪ್ರಕಟಿಸಿದ ಇತ್ತೀಚಿನ ವರದಿಯಲ್ಲಿ ಹೇಳಲಾಗಿದೆ.

             ಅಧ್ಯಯನ ನಡೆಸಿದ ಕೋವಿಡ್-19 ಸೋಂಕಿನಿಂದ ತೀವ್ರವಾಗಿ ಪೀಡಿತವಾದ 20 ದೇಶಗಳ ಪೈಕಿ ಅತ್ಯಧಿಕ ಮಕ್ಕಳು ಅನಾಥರಾಗಿರುವುದು ಭಾರತದಲ್ಲಿ ಎನ್ನುವುದು ಅಂಕಿ ಅಂಶಗಳಿಂದ ದೃಢಪಟ್ಟಿದೆ. ಜರ್ಮನಿಯಲ್ಲಿ 2,400 ಮಕ್ಕಳು ಅನಾಥರಾಗಿರುವುದು ಇದು ಕನಿಷ್ಠ ಪ್ರಮಾಣವಾಗಿದೆ. 1000 ಮಕ್ಕಳ ಪೈಕಿ ಅತ್ಯಧಿಕ ಮಂದಿ ಅನಾಥರಾಗಿರುವುದು ಪೆರು (8.3) ದೇಶದಲ್ಲಿ. ದಕ್ಷಿಣ ಆಫ್ರಿಕಾ (7.2) ನಂತರದ ಸ್ಥಾನದಲ್ಲಿದೆ. ಜಾಗತಿಕವಾಗಿ 33 ಲಕ್ಷ ಮಕ್ಕಳು ಕನಿಷ್ಠ ಒಬ್ಬ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಉಳಿದಂತೆ 18.3 ಲಕ್ಷ ಮಕ್ಕಳು ತಮ್ಮ ಅಜ್ಜಂದಿರು ಅಥವಾ ವೃದ್ಧ ಪಾಲಕರನ್ನು ಕಳೆದುಕೊಂಡಿದ್ದಾರೆ.

          ಅಂದಾಜಿನ ಪ್ರಕಾರ 18 ವರ್ಷಕ್ಕಿಂತ ಕೆಳಗಿನ ಕನಿಷ್ಠ 52 ಲಕ್ಷ ಮಕ್ಕಳು ಸಾಂಕ್ರಾಮಿಕದಲ್ಲಿ ತಮ್ಮ ಪೋಷಕರು ಅಥವಾ ಪಾಲಕರನ್ನು ಕಳೆದುಕೊಂಡಿದ್ದಾರೆ. ಏತನ್ಮಧ್ಯೆ ದೇಶದಲ್ಲಿ ಗುರುವಾರ 14148 ಹೊಸ ಪ್ರಕರಣಗಳು ವರದಿಯಾಗಿದ್ದು, 302 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿನಿಂದ ದೇಶದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 5,12,924ಕ್ಕೇರಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries