HEALTH TIPS

ಮಾರುಕಟ್ಟೆಗೆ ಬಿಡುಗಡೆಯಾಯ್ತು ಹಾರುವ ಬೈಕ್‌- 2 ಗಂಟೆ ಚಾರ್ಜ್‌ ಮಾಡಿದ್ರೆ 20 ನಿಮಿಷ ಹಾರಾಟ!

          ನ್ಯೂಯಾರ್ಕ್‌: ಟ್ರಾಫಿಕ್‌ ಕಿರಿಕಿರಿಯಿಂದ ವಾಹನ ಓಡಿಸುವುದೇ ಕಷ್ಟವಾಗಿರುವ ಈ ಕಾಲದಲ್ಲಿ ಆಕಾಶದಿಂದ ಹಾರಿ ಹೋಗುವ ಹಾಗಿದ್ದರೆ ಎಷ್ಟು ಚೆನ್ನ ಎಂದು ಅಂದುಕೊಳ್ಳುವವರೇ ಎಲ್ಲಾ. ಇದೀಗ ಅಂಥವರ ಕನಸು ನನಸಾಗಿದೆ. ಏಕೆಂದರೆ ಹಾರುವ ಬೈಕ್‌ ರೆಡಿಯಾಗಿದೆ.

           ಇಲ್ಲಿಯವರೆಗೆ ಹಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಲ್ಪನಿಕ ಬೈಕ್‌ ನಿಜವಾಗಿಯೂ ವಾಸ್ತವಕ್ಕೆ ಬಂದಿದೆ. ಜೇಮ್ಸ್ ಬಾಂಡ್ ಸ್ಟೈಲಿನಲ್ಲಿ ಬೈಕ್ ಮೇಲೆ ಹತ್ತಿ ಹಾರಾಟ ಮಾಡಬಲ್ಲ ಕನಸು ನನಸಾಗಿದೆ.


            ಅಂಥದ್ದೊಂದು ಬೈಕ್‌ ಅಮೆರಿಕದಲ್ಲಿ ತಯಾರಿಸಲಾಗಿದೆ. ಇದರ ಹೆಸರು ಜೆಟ್ಸನ್ ಒನ್. ಇಂಥದ್ದೊಂದು ಬೈಕ್‌ ವಿನ್ಯಾಸಗೊಳಿಸಿದವರು ಸ್ವೀಡಿಷ್-ಪೋಲಿಷ್ ಕಂಪನಿ ಜೆಟ್ಸನ್. ಸದ್ಯ ಇದು ವಿಶ್ವದ ಮೊದಲ ಹಾರುವ ಬೈಕ್‌ ಎಂದು ಪ್ರಸಿದ್ಧಿ ಪಡೆದಿದೆ. ಖಾಸಗಿ ಬಳಕೆ ಮಾತ್ರವಲ್ಲದೇ ಇದನ್ನು ವಾಣಿಜ್ಯ ಬಳಕೆಗೂ ಬಳಸಲು ಅನುಕೂಲ ಆಗುವಂತೆ ರಚನೆ ಮಾಡಲಾಗಿದೆ.

           ಕಳೆದ ಅಕ್ಟೋಬರ್‌ನಲ್ಲಿಯೇ ಈ ಬೈಕ್‌ ಬಿಡುಗಡೆಯಾಗಿತ್ತು. ಇದೀಗ ಪೂರ್ಣಪ್ರಮಾಣದಲ್ಲಿ ಹಾರಾಟ ನಡೆಸುತ್ತಿದೆ. ಎರಡು ಗಂಟೆಗಳ ಬ್ಯಾಟರಿ ಚಾರ್ಜಿಂಗ್ ಸಮಯದೊಂದಿಗೆ 20 ನಿಮಿಷಗಳವರೆಗೆ ಹಾರುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದಾಗಲೇ ಮಾರುಕಟ್ಟೆಗೂ ಬಿಡುಗಡೆಯಾಗಿದ್ದು. ಮುಂದಿನ ವರ್ಷದ ಆದೇಶಗಳನ್ನು ಈಗಾಗಲೇ ತೆಗೆದುಕೊಳ್ಳಲಾಗುತ್ತಿದೆ ಎಂದು ಕಂಪನಿ ಹೇಳಿದೆ.

           ಬೈಕ್‌ ತೂಕ 86 ಕೆಜಿ ಇದೆ. ಇದು ಸಂಪೂರ್ಣ ಇಲೆಕ್ಟ್ರಿಕ್ ಚಾಲಿತವಾಗಿದೆ. ಪೈಲಟ್ ಪರವಾನಗಿಯ ಅಗತ್ಯವೂ ಇಲ್ಲ, 63 mph (ಅಂದಾಜು 101 kmh) ವೇಗದಲ್ಲಿ ಹಾರಬಲ್ಲದು. ಇದರ ಟೇಕ್ ಆಫ್ ಮಾಡಲು ಯಾವುದೇ ರನ್ ವೇ ಅಗತ್ಯವಿಲ್ಲ ಮತ್ತು ಎಲ್ಲಿ ಬೇಕಾದರೂ ಸುಲಭವಾಗಿ ಲ್ಯಾಂಡ್ ಮಾಡಬಹುದು ಎಂದು ಕಂಪನಿ ಹೇಳಿದೆ. ಇದನ್ನು ಜಾಯ್‌ಸ್ಟಿಕ್‌ನಿಂದ ನಿಯಂತ್ರಿಸಲಾಗುತ್ತದೆ. ಆದರೆ ನಗರಗಳಲ್ಲಿ ಹಾರಲು ಇನ್ನೂ ಅನುಮತಿ ನೀಡಿಲ್ಲ. ಇದನ್ನು ತೆರೆದ ಪ್ರದೇಶದಲ್ಲಿ ಮಾತ್ರ ಹಾರಿಸಬಹುದು. 2026 ರ ವೇಳೆಗೆ ಎರಡು ಆಸನಗಳ ಹಾರುವ ಕಾರನ್ನು ತಯಾರಿಸುವುದು ನಮ್ಮ ಮುಂದಿನ ಯೋಜನೆಯಾಗಿದೆ ಎಂದು ಕಂಪನಿ ಹೇಳಿದೆ.

            ಅಂದಹಾಗೆ ಇದರ ಬೆಲೆ 68 ಸಾವಿರ ಪೌಂಡ್‌ಗಳು, ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 68.84 ಲಕ್ಷ ರೂಪಾಯಿಗಳು.

ಇಲ್ಲಿದೆ ನೋಡಿ ವಿಡಿಯೋ (ಕೃಪೆ: Independent TV)


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries