ಕಾಸರಗೋಡು: ಎಐಐಎಂಎಸ್ ಕಾಸರಗೋಡಿಗೆ ಮಂಜೂರುಗೊಳಿಸುವಂತೆ ಆಗ್ರಹಿಸಿ 'ಏಮ್ಸ್ ಜನಪರ ಒಕ್ಕೂಟ'ದಿಂದ ನಡೆದುಬರುತ್ತಿರುವ ನಿರಾಹಾರ ಸತ್ಯಾಗ್ರಹ 20ನೇ ದಿನಕ್ಕೆ ಕಾಲಿರಿಸಿದ್ದು, ಮಂಗಳವಾರ ಪಿಡಿಪಿ ನಿರಾಹಾರ ಸತ್ಯಾಗ್ರಹದಲ್ಲಿ ಪಾಲ್ಗೊಂಡಿತು.
ಪಿಡಿಪಿ ರಾಜ್ಯ ಸಮಿತಿ ಕಾರ್ಯದರ್ಶಿ ಸುಬೈರ್ ಪಡ್ಪು ಧರಣಿ ಉದ್ಘಾಟಿಸಿದರು. ಪಿಡಿಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಮಹಮ್ಮದ್ ಉಪ್ಪಳ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡಿಗೆ ಏಮ್ಸ್ ಮಂಜೂರುಗೊಳಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಒತ್ತಡ ಹೆರಬೇಕು. ಈ ಮೂಲಕ ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಸೇರಿದಂತೆ ಉನ್ನತ ಚಿಕಿತ್ಸೆಗಾಗಿ ಇತರ ಜಿಲ್ಲೆ ಹಾಗೂ ರಾಜ್ಯವನ್ನು ಆಶ್ರಯಿಸುವುದಕ್ಕೆ ಮುಕ್ತಿ ಒದಗಿಸಿಕೊಡಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು.
ಪಿಡಿಪಿ ಮುಖಂಡರು ಹಾಗೂ ಏಮ್ಸ್ ಹೋರಾಟದ ಮುಂಚೂಣಿ ನಾಯಕರಾದ ಅನಂತನ್ ಪೆರುಂಬಳ, ತಾಜುದ್ದೀನ್ ಪಡಿಞËರ್, ಶಾಫಿ ಕಲ್ಲುವಳಪ್ಪಿಲ್, ಶೆರೀಫ್ ಮುಗು, ಗಣೇಶ್ ಅರಮಂಗಾನ, ಅಂಬಲತ್ತರ ಕುಞÂಕೃಷ್ಣನ್, ಇಸ್ಮಾಯಿಲ್ ಖಬರ್ದಾರ್, ಅಬ್ದುಲ್ ರಹಮಾನ್ ಬಂದ್ಯೋಡುಮುಂತಾದವರು ಉಪಸ್ಥಿತರಿದ್ದರು.