ಲಖನೌ: ಉತ್ತರ ಪ್ರದೇಶದಲ್ಲಿ ಇಂದು 59 ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. 2017ರ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಾದಕ ನೋಟದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದ ಚುನಾವಣಾ ಅಧಿಕಾರಿ ರೀನಾ ದ್ವಿವೇದಿ ಇದೀಗ ಮತ್ತೊಮ್ಮೆ ಮಾದಕ ನೋಟವನ್ನು ಬೀರಿದ್ದಾರೆ.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಬಿರುಸಿನಿಂದ ಸಾಗಿದೆ. ಚುನಾವಣಾ ಅಧಿಕಾರಿಯಾಗಿರುವ ರೀನಾ ದ್ವಿವೇದಿ ಅವರು ಮತ್ತೊಮ್ಮೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ವೈರಲ್ ಆಗಿದೆ. ಇವಿಎಂ ಹಿಡಿದು ಹೋಗುತ್ತಿರುವ ಅವರ ಫೋಟೋ ವೈರಲ್ ಆಗಿದೆ.
ಕಳೆದ ಬಾರಿ ದ್ವಿವೇದಿ ಅವರು ಸಾಂಪ್ರದಾಯಿಕ ಹಳದಿ ಸೀರೆಯಲ್ಲಿ ಮಾದಕವಾಗಿ ಕಾಣಿಸಿಕೊಂಡಿದ್ದರು. ಇಂದು ಹೊಸ ಅವತಾರದಲ್ಲಿ ಕಾಣಸಿಕೊಳ್ಳುವ ಮೂಲಕ ಮತ್ತೊಮ್ಮೆ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಈ ಬಾರಿ ರೀನಾ ಅವರು ಕಪ್ಪು ಬಣ್ಣದ ಸ್ಲೀವ್ಲೆಸ್ ಟಾಪ್ ಮತ್ತು ಹೈವೇಯ್ಸ್ಟ್ ಪ್ಯಾಂಟ್ ಧರಿಸಿ, ಗುಲಾಬಿ ಬಣ್ಣದ ಬ್ಯಾಗ್ ಹಿಡಿದು ಬಂದಿದ್ದಾರೆ. ರೀನಾ ಅವರು ಲಖನೌದ ಬಸ್ತಿಯಾ, ಗೋಸೈಗಂಜ್ ಬೂತ್ ಸಂಖ್ಯೆ 114ರಲ್ಲಿರುವ ಮತಗಟ್ಟೆಗೆ ಕರ್ತವ್ಯಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಸೆರೆಹಿಡಿಯಲಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ಹಿಂದಿ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ರೀನಾ, ಈ ಬಾರಿ ಗರಿಷ್ಠ ಮತದಾನವಾಗುವ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದ್ದಾರೆ. ತನ್ ಲುಕ್ ಬಗ್ಗೆಯು ಪ್ರತಿಕ್ರಿಯಿಸಿದ ಅವರು, ನಾನು ಫ್ಯಾಷನ್ ಟ್ರೆಂಡ್‌ಗಳನ್ನು ಅನುಸರಿಸುತ್ತೇನೆ ಎಂದು ಹೇಳಿದ್ದಾರೆ. ನಾನು ಸಾರ್ವಕಾಲಿಕ ಅಪ್ಡೇಟ್ ಆಗಲು ಇಷ್ಟಪಡುತ್ತೇನೆ. ಹಾಗಾಗಿ ನನ್ನ ಗೆಟಪ್ ಕೂಡ ಬದಲಾಗಿದೆ ಎಂದು ಹೇಳಿದರು.
ರೀನಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದು, ತಮ್ಮ ಜೀವನದಲ್ಲಿ ನಡೆಯುವ ವಿಶೇಷ ಕ್ಷಣಗಳು ಮತ್ತು ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.