ಮುಂಬೈ: 2021-22ರ ಸಾಲಿನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ ಈ ಹಿಂದೆ ಅಂದಾಜಿಸಿದಂತೆ ಶೇ. 9.2 ರಿಂದ ಶೇ. 8.6ಕ್ಕೆ ಕುಸಿತದ ಮುನ್ಸೂಚನೆ ನೀಡಿದೆ.
ಈ ವರ್ಷ ಭಾರತದ ಆರ್ಥಿಕ ಅಭಿವೃದ್ಧಿ ಶೇ. 9.2 ರಷ್ಟು ಇರಲಿದೆ ಎಂದು ರಾಷ್ಟ್ರೀಯ ಅಂಕಿಅಂಶ ಸಂಸ್ಥೆ ಅಂದಾಜಿಸಿತ್ತು. ಸೋಮವಾರ ದೇಶದ ಆದಾಯದ ಎರಡನೇ ಮುಂಗಡ ಅಂದಾಜನ್ನು ಬಿಡುಗಡೆ ಮಾಡಲಿದೆ.
ಭಾರತದ ರೇಟಿಂಗ್ ವಿಶ್ಲೇಷಣೆ ಪ್ರಕಾರ, 2022ರ ನೈಜ ಒಟ್ಟು ದೇಶಿಯ ಉತ್ಪನ ಬೆಳವಣಿಗೆ ರೂ. 147.2 ಲಕ್ಷ ಕೋಟಿ ಎಂದು ರಾಷ್ಟ್ರೀಯ ಅಂಕಿಅಂಶ ಸಂಸ್ಥೆ ಹೇಳುವ ಸಾಧ್ಯತೆಯಿದೆ. ಇದು ಜನವರಿ 7, 2022 ರಂದು ಬಿಡುಗಡೆಯಾದ ಮೊದಲ ಮುಂಗಡ ಅಂದಾಜಿನಲ್ಲಿ ಶೇಕಡಾ 9.2 ರಿಂದ ಶೇ. 8.6 ರಷ್ಟು ಜೆಡಿಪಿ ಬೆಳವಣಿಗಗೆ ದರವಿರಲಿದೆ ಎಂದು ಹೇಳಿದೆ.
ಜನವರಿ 31, 2022ರಂದು ಬಿಡುಗಡೆಯಾದ 2021ರ ಮೊದಲ ಪರಿಷ್ಕೃತ ರಾಷ್ಟ್ರೀಯ ಆದಾಯ ಅಂದಾಜುವಿನಲ್ಲಿ ಜೆಡಿಪಿ 135. 6 ಲಕ್ಷ ಕೋಟಿಯಂದು ಮೇಲ್ಮುಖವಾಗಿ ಪರಿಷ್ಕರಣೆ ಮಾಡಿರುವುದು ಕುಸಿತಕ್ಕೆ ಕಾರಣ ಎಂದು ಏಜೆನ್ಸಿ ತಿಳಿಸಿದೆ.
ಇದರ ಪರಿಣಾಮವಾಗಿ ಮೇ 31, 2021 ರಂದು ಬಿಡುಗಡೆ ಮಾಡಿದ ತಾತ್ಕಾಲಿಕ ಅಂದಾಜು ಶೇ. (-)7.3 ರಿಂದ ಶೇ. (-) 6.6ಕ್ಕೆ ಬೆಳವಣಿಗೆಯಾಗಿದೆ. ಇದಲ್ಲದೇ, 2020ರ ಆರ್ಥಿಕ ವರ್ಷದ ರಾಷ್ಟ್ರೀಯ ಆದಾಯದ ಎರಡನೇ ಪರಿಷ್ಕೃತ ಅಂದಾಜು ಈ ಹಿಂದೆ ಯೋಜಿಸಿದಂತೆ ಶೇ.4ಕ್ಕೆ ಹೋಲಿಸಿದರೆ ಶೇ. 3.7 ರಷ್ಟಿತ್ತು. 2019ರ ಆರ್ಥಿಕ ವರ್ಷದ ಮೂರನೇ ಅಂದಾಜಿನಂತೆ ಬೆಳವಣಿಗೆ ದರ ಶೇ. 6.5 ರಷ್ಟಿತ್ತು.