HEALTH TIPS

ಕೇಂದ್ರ ಬಜೆಟ್ 2022: ರಕ್ಷಣಾ ಬಜೆಟ್ ನ ಶೇ.35ರಷ್ಟು ಅನುದಾನ ಸಂಶೋಧನೆಗೆ ಮೀಸಲು, ಶೇ.68ರಷ್ಟು ಭಾರತದಲ್ಲೇ ಉತ್ಪಾದನೆಗೆ ಒತ್ತು

         ನವದೆಹಲಿ: ಹಾಲಿ ವರ್ಷದ ಕೇಂದ್ರ ಬಜೆಟ್ ನಲ್ಲಿ ರಕ್ಷಣಾ ಇಲಾಖೆಗೆ ಒತ್ತು ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರಕ್ಷಣಾ ಬಜೆಟ್ ನ ಶೇ.35ರಷ್ಟು ಅನುದಾನ ಸಂಶೋಧನೆಗೆ ಮೀಸಲಿಡಲಾಗಿದ್ದು, ಶೇ.68ರಷ್ಟು ಭಾರತದಲ್ಲೇ ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.


         ರಕ್ಷಣಾ ಇಲಾಖೆಯಲ್ಲೂ ಆತ್ಮನಿರ್ಭರಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದ್ದು, ರಕ್ಷಣಾ ಸಾಮಗ್ರಿ ಖರೀದಿಯಲ್ಲಿ ಶೇ.68ರಷ್ಟು ಸ್ಥಳೀಯ ಸಾಮಗ್ರಿ ಖರೀದಿ ಕಡ್ಡಾಯ ಮಾಡಲಾಗಿದೆ. ಇದರೊಂದಿಗೆ ಪರ್ಸೆಂಟೇಜ್ ವ್ಯವಹಾರಕ್ಕೂ ಕಡಿವಾಣ ಬೀಳಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

          ಅಂತೆಯೇ ರಕ್ಷಣಾ ಬಜೆಟ್ ನ ಶೇ.35ರಷ್ಟು ಅನುದಾನ ಸಂಶೋಧನೆಗೆ ಮೀಸಲಿಡಲಾಗಿದ್ದು, ರಕ್ಷಣಾ ಇಲಾಖೆಯಲ್ಲಿ ಖರೀದಿ ಮತ್ತು ಸಂಶೋಧನೆಗೆ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries