ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ 2022ರ ವರ್ಷದ ಮೊದಲ ಉಡಾವಣಾ ಕಾರ್ಯಾಚರಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ನಾಳೆ ಅಂದರೆ ಸೋಮವಾರ ಇಸ್ರೋ ತನ್ನ ಮೊದಲ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಪಿ.ಎಸ್.ಎಲ್.ವಿ.-ಸಿ.52/ಇಒಎಸ್-04 ಮಿಷನ್ ನ ಭಾಗವಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್ ನಿಂದ ಫೆಬ್ರವರಿ ೧೪ರ ಬೆಳಿಗ್ಗೆ 5.55ಕ್ಕೆ ಪೋಲಾರ್ ಉಪಗ್ರಹ ಉಡಾವಣಾ ವಾಹನ, ಪಿಎಸ್ ಎಲ್ ವಿ-ಸಿ52 ಉಡಾವಣೆಗೆ ನಿಗದಿಯಾಗಿದೆ.
ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಇಸ್ರೋ, 2022ರ ಮೊದಲ ಉಪಗ್ರಹವನ್ನು ಫೆಬ್ರವರಿ 14ರ ಸೋಮವಾರದ ನಾಳೆ ನಡೆಯಲಿದೆ. 25 ಗಂಟೆ 30 ನಿಮಿಷಗಳ ಕೌಂಟ್ ಡೌನ್ ಪ್ರಕ್ರಿಯೆ ಭಾನುವಾರ ಬೆಳಿಗ್ಗೆ 4.26ಕ್ಕೆ ಪ್ರಾರಂಭವಾಯಿತು ಎಂದು ತಿಳಿಸಿದೆ.
1710 ಕೆಜಿ ತೂಕದ ಭೂ ವೀಕ್ಷಣಾ ಉಪಗ್ರಹ ಇಒಎಸ್-04 ಅನ್ನು 526 ಕಿಲೋಮೀಟರ್ ದೂರದ ಸೂರ್ಯನ ಸಿಂಕ್ರೋನಸ್ ಧ್ರುವ ಕಕ್ಷೆಗೆ ಪರಿಭ್ರಮಿಸಲು ವಿನ್ಯಾಸಗೊಳಿಸಲಾದ ಪಿಎಸ್ ಎಲ್ ವಿ-ಸಿ52, ಎರಡು ಸಣ್ಣ ಉಪಗ್ರಹಗಳನ್ನು ಸಹ ಪ್ರಯಾಣಿಕರಾಗಿ ಸಾಗಿಸಲಿದೆ ಎಂದು ಇಸ್ರೋ ತಿಳಿಸಿದೆ.
ಸಹ-ಪ್ರಯಾಣಿಕರಾಗಿ ಸಾಗಿಸಲಾಗುವ ಎರಡು ಉಪಗ್ರಹಗಳಲ್ಲಿ ಬೌಲ್ಡರ್ ನ ಕೊಲೊರಾಡೋ ವಿಶ್ವವಿದ್ಯಾಲಯದ ವಾತಾವರಣ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಾಲಯದ ಸಹಯೋಗದೊಂದಿಗೆ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ (ಐಐಎಸ್ ಟಿ) ಐಎನ್ ಎಸ್ ಪಿಐಆರ್ ಎಸ್ಯಾಟ್-1 ಎಂದು ಕರೆಯಲಾಗುವ ಒಂದು ವಿದ್ಯಾರ್ಥಿ ಉಪಗ್ರಹ ಮತ್ತು ಭಾರತೀಯ ಬಾಹ್ಯಾಕಾಶ ಸಂಸ್ಥೆಯಿಂದ ತಂತ್ರಜ್ಞಾನ ಪ್ರದರ್ಶನಕಾರ ಉಪಗ್ರಹ (ಐಎನ್‌ಎಸ್-2ಟಿಡಿ) ಉಪಗ್ರಹ ಸೇರಿವೆ.
ಐಎನ್‌ಎಸ್-2ಟಿಡಿ ಭಾರತ-ಭೂತಾನ್ ಜಂಟಿ ಉಪಗ್ರಹ (ಐಎನ್‌ಎಸ್-2ಬಿ) ಗೆ ಪೂರ್ವಗಾಮಿಯಾಗಿದೆ.