HEALTH TIPS

ಕೇಂದ್ರ ಬಜೆಟ್ 2022: ಜನ ಸಾಮಾನ್ಯರಿಗೆ ಯಾವುದು ಅಗ್ಗ? ಯಾವುದು ದುಬಾರಿ?

          ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಏಪ್ರಿಲ್​ 1 ರಿಂದ ಆರಂಭವಾಗುವ ಪ್ರಸಕ್ತ ಹಣಕಾಸು ವರ್ಷದ ಬಜೆಟ್​ ಅನ್ನು ಸಂಸತ್ತಿನಲ್ಲಿಂದು ಪ್ರಸ್ತುತ ಪಡಿಸಿದರು. ಹಣಕಾಸು ಸಚಿವೆಯಾಗಿ ಇದು ಅವರ ನಾಲ್ಕನೇ ಬಜೆಟ್​ ಮಂಡನೆಯಾಗಿದೆ.

              ಕರೊನಾ ಅಲೆಗಳ ಹೊಡೆತದಿಂದ ಹಳಿತಪ್ಪಿರುವ ಆರ್ಥಿಕತೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಹೊಸ ಯೋಜನೆಗಳಿಗೆ ಹೆಚ್ಚು ಒತ್ತು ಕೊಡದೇ ಮೂಲಭೂತ ಸೌಕರ್ಯಗಳನ್ನು ಮೊದಲ ಆದ್ಯತೆಯನ್ನಾಗಿಸಿ ಮತ್ತು ಕೆಲವೊಂದು ವಿನಾಯಿಗಳನ್ನು ನೀಡುವ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಿದ್ದಾರೆ.

             2022-2023ರ ಬಜೆಟ್ ಸಾರ್ವಜನಿಕ ಹೂಡಿಕೆಯ ಮೂಲಕ ಆರ್ಥಿಕ ಬೆಳವಣಿಗೆಗೆ ಅಡಿಪಾಯವನ್ನು ಹಾಕುವುದರೊಂದಿಗೆ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯು ಸಾಂಕ್ರಾಮಿಕ ಕುಸಿತದಿಂದ ಹೊರಬರಲಿದೆ ಎಂದು ನಿರ್ಮಲಾ ಸೀತಾರಾಮನ್​ ಹೇಳಿದರು.

ಯಾರಿಗೂ ಹೊರೆಯಾಗದ ಬಜೆಟ್​ ಇದಾಗಿದ್ದು. ಕೃಷಿ, ಆಭರಣಗಳ ಮೇಲಿನ ಸುಂಕ ಇಳಿಸಿ ಸರ್ಕಾರ ಗುಡ್​ ನ್ಯೂಸ್​ ಕೊಟ್ಟಿದೆ. ನೇರ ಆದಾಯ ತೆರಿಗೆಯಲ್ಲೂ ಯಾವುದೇ ಏರಿಕೆ ಮಾಡಿಲ್ಲ. ಕೆಲ ವಸ್ತುಗಳ ಮೇಲಿನ ಸುಂಕ ಇಳಿಕೆಯಿಂದಾಗಿ ಬೆಲೆ ಇಳಿಕೆಯೂ ಆಗುವ ಸಾಧ್ಯತೆ ಇದೆ. ಅಲ್ಲದೆ, ದಿನ ನಿತ್ಯ ಬಳಸುವ ಕೆಲ ವಸ್ತಗಳ ಮೇಲೆಯು ತೆರಿಗೆ ಕಡಿತ ಮಾಡಲಾಗಿದೆ.

                ಬಜೆಟ್​ ಬಳಿಕ ಜನಸಾಮಾನ್ಯರಿಗೆ ಯಾವುದು ಅಗ್ಗ ಮತ್ತು ಯಾವುದು ದುಬಾರಿಯಾಗಲಿದೆ ಎಂಬ ಪಟ್ಟಿ ಈ ಕೆಳಕಂಡಂತಿದೆ.

ಅಗ್ಗ

  • ಬಟ್ಟೆಗಳು
  • ಹರಳುಗಳು ಮತ್ತು ವಜ್ರ
  • ಅನುಕರಣೆ ಆಭರಣ
  • ಮೊಬೈಲ್​ ಫೋನ್​ಗಳು
  • ಮೊಬೈಲ್​ ಚಾರ್ಜರ್​ಗಳು
  • ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳ ಮೇಲಿನ ಕಸ್ಟಮ್ ಸುಂಕಗಳು
  • ಮೆಥನಾಲ್​ ಸೇರಿದಂತೆ ಕೆಲ ರಾಸಾಯನಿಕ ಮೇಲಿನ ಕಸ್ಟಮ್​ ಸುಂಕಗಳು
  • ಸ್ಟೀಲ್ ಸ್ಕ್ರ್ಯಾಪ್ ಮೇಲಿನ ರಿಯಾಯಿತಿ ಕಸ್ಟಮ್ಸ್ ಸುಂಕವನ್ನು 1 ವರ್ಷಕ್ಕೆ ವಿಸ್ತರಿಸಲಾಗಿದೆ
  • ಧರಿಸಬಹುದಾದ ದೇಶೀಯ ಎಲೆಕ್ಟ್ರಾನಿಕ್ ಸಾಧನಗಳು, ಕೇಳಬಹುದಾದ ಸಾಧನಗಳು ಮತ್ತು ಎಲೆಕ್ಟ್ರಾನಿಕ್ ಸ್ಮಾರ್ಟ್ ಮೀಟರ್

ತುಟ್ಟಿ

  • ಎಲ್ಲ ಆಮದು ವಸ್ತುಗಳು ದುಬಾರಿಯಾಗಲಿದೆ
  • ಕೊಡೆಗಳ ಮೇಲಿನ ಸುಂಕವನ್ನು ಹೆಚ್ಚು ಮಾಡಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries