ಮುಳ್ಳೇರಿಯ: ಕುಂಟಾರು ಸಮೀಪದ ಕುಂಟಾರುಮೂಲೆ ಶ್ರೀ ವಯನಾಟ್ಟು ಕುಲವನ್ ದೈವಸ್ಥಾನದ ಪುನಃ ಪ್ರತಿಷ್ಠಾ ಕಾರ್ಯಕ್ರಮಗಳು ಫೆ.19 ಮತ್ತು 20ರಂದು ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಫೆ.19ರಂದು ಸಂಜೆ ಕುಂಟಾರು ಶ್ರೀ ಮಹಾವಿಷ್ಣು ದೇವಾಲಯದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ರಾತ್ರಿ 7ಕ್ಕೆ ಕುತ್ತಿಪೂಜೆ, ಫೆ.20ರಂದು ಪ್ರಾತಃಕಾಲ 5ಕ್ಕೆ ಶ್ರೀ ಗಣಪತಿಹೋಮ, ಬೆಳಿಗ್ಗೆ 8.05ರಿಂದ ಶ್ರೀ ಮಹಾವಿಷ್ಣುಮೂರ್ತಿ ಮತ್ತು ಶ್ರೀ ವಯನಾಟ್ಟು ಕುಲವನ್ ದೈವಗಳ ಪ್ರತಿಷ್ಠೆ, ಅನ್ನದಾನ,ರಾತ್ರಿ 8ಕ್ಕೆ ಶ್ರೀ ದೈವಕ್ಕೆ ಪುತ್ತರಿ, ಅನ್ನದಾನ ನಡೆಯಲಿದೆ.