ಕೋಲ್ಕತ್ತಾ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಕೋಲ್ಕತ್ತಾದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 17 ರನ್ ಗಳಿಂದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 184 ರನ್ ಪೇರಿಸಿದ್ದು ವೆಸ್ಟ್ ಇಂಡೀಸ್ ಗೆ 185 ರನ್ ಗಳ ಗುರಿ ನೀಡಿದೆ. ಟೀಂ ಇಂಡಿಯಾ ನೀಡಿದ ಬೃಹತ್ ಮೊತ್ತದ ಬೆನ್ನಟ್ಟಿದ ವೆಸ್ಟ್ ಇಂಡೀಸ್ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 167 ರನ್ ಪೇರಿಸಲಷ್ಟೇ ಸಾಧ್ಯವಾಯಿತು.
ವಿಂಡೀಸ್ ಪರ ಮಹೆರ್ಸ್ 6, ಹೋಪ್ 8, ಪೂರನ್ 61, ಪೊವೆಲ್ 25 ಮತ್ತು ಶೆಫರ್ಡ್ 29 ರನ್ ಪೇರಿಸಿದ್ದಾರೆ.
ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಹರ್ಷಲ್ ಪಟೇಲ್ ದೀಪಕ್ ಚಹಾರ್, ವೆಂಕಟೇಶ್ ಅಯ್ಯರ್, ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದಿದ್ದಾರೆ.
ಟೀಂ ಇಂಡಿಯಾ ಪರ ರುತುರಾಜ್ ಗಾಯಕ್ವಾಡ್ 4, ಇಶಾನ್ ಕಿಶಾನ್ 34, ಶ್ರೇಯಸ್ ಅಯ್ಯರ್ 25, ಸೂರ್ಯ ಕುಮಾರ್ 65, ವೆಂಕಟೇಶ್ ಅಯ್ಯರ್ ಅಜೇಯ 35 ರನ್ ಬಾರಿಸಿದ್ದಾರೆ.
ವೆಸ್ಟ್ ಇಂಡೀಸ್ ಪರ ಬೌಲಿಂಗ್ ನಲ್ಲಿ ಜೇಸನ್ ಹೋಲ್ಡರ್, ರೊಮರಿಯಾ, ಚೇಸ್, ವಾಲ್ಶ್ ಮತ್ತು ಡಾರ್ಕೆಸ್ ತಲಾ 1 ವಿಕೆಟ್ ಪಡೆದಿದ್ದಾರೆ.