ನಾಗಪಟ್ಟಣಂ: ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯನ್ನು(ಐಎಂಬಿಎಲ್) ದಾಟಿದ ಆರೋಪದ ಮೇಲೆ ತಮಿಳುನಾಡು ಮತ್ತು ಪುದುಚೇರಿಯ ಕನಿಷ್ಠ 21 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಸೋಮವಾರ ರಾತ್ರಿ ಕೊಡಿಯಾಕರೈ ಬಳಿ ಬಂಧಿಸಿದೆ.
ಬಂಧಿತ ಮೀನುಗಾರರು ನಾಗಪಟ್ಟಣಂ, ಮೈಲಾಡುತುರೈ, ವಿಲ್ಲುಪುರಂ ಮತ್ತು ಪುದುಚೇರಿಯ ಕಾರೈಕಲ್ ಜಿಲ್ಲೆಯವರು ಎಂದು ಗುರುತಿಸಲಾಗಿದೆ.
ಮೀನುಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು, “ನಾವು ಬಂಧಿತ ಮೀನುಗಾರರ ಬಗ್ಗೆ ಸರ್ಕಾರಕ್ಕೆ ವರದಿಗಳನ್ನು ಕಳುಹಿಸುತ್ತಿದ್ದೇವೆ. ರಾಜ್ಯ ಸರ್ಕಾರವು ಈ ವಿಷಯದ ಬಗ್ಗೆ ವಿದೇಶಾಂಗ ಸಚಿವಾಲಯದೊಂದಿಗೆ ಸಂವಹನ ನಡೆಸಲಿದೆ” ಎಂದು ಹೇಳಿದ್ದಾರೆ.
ಎರಡು ಪ್ರತ್ಯೇಕ ಘಟನೆಗಳಲ್ಲಿ 11 ಮಂದಿಯ ಗುಂಪನ್ನು ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಬಂಧಿಸಲಾಗಿದೆ. 12 ಮೀನುಗಾರರ ಸಿಬ್ಬಂದಿ ಕೋಡಿಯಾಕರೈ(ಪಾಯಿಂಟ್ ಕ್ಯಾಲಿಮೆರ್) ನಿಂದ ಸುಮಾರು 15 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಅವರಲ್ಲಿ 11 ಮಂದಿ ನಾಗಪಟ್ಟಣಂ ಜಿಲ್ಲೆಯ ಅಕ್ಕರೈಪೆಟ್ಟೈಯವರು, ಒಬ್ಬರು ಮೈಲಾಡುತುರೈ ಜಿಲ್ಲೆಯ ಚಂದಿರಪ್ಡಿಯವರು. ಯಾಂತ್ರೀಕೃತ ದೋಣಿ ಅಕ್ಕರೈಪೆಟ್ಟೈನಿಂದ ವಿ ಅಮೃತಲಿಂಗಂ ಅಡಿಯಲ್ಲಿ ನೋಂದಾಯಿತವಾಗಿದೆ. ಅಂದು ಬೆಳಗ್ಗೆ ನಾಗಪಟ್ಟಣಂ ಮೀನುಗಾರಿಕಾ ಬಂದರಿನಿಂದ ಹೊರಟಿದ್ದರು. ಸಿಬ್ಬಂದಿ ಮೀನುಗಾರಿಕೆ ನಡೆಸುತ್ತಿದ್ದಾಗ, ಶ್ರೀಲಂಕಾ ನೌಕಾಪಡೆಯು ಅವರ ಹಡಗುಗಳಲ್ಲಿ ಬಂದು ಐಎಂಬಿಎಲ್ ಅನ್ನು ದಾಟಿ ಶ್ರೀಲಂಕಾದ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದೆ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ.
ಇನ್ನು ಒಂಭತ್ತು ಸಿಬ್ಬಂದಿಯನ್ನು ಮಧ್ಯರಾತ್ರಿ ಬಂಧಿಸಲಾಗಿದೆ. ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಕಾರೈಕಲ್ ಜಿಲ್ಲೆಯ ಕೊಟ್ಟುಚೆರಿಮೇಡುವಿನ ಎಎಂ ಚಂದಿರ ಅವರ ಮಾಲೀಕತ್ವದಲ್ಲಿದೆ. ಅವರು ಕಾರೈಕಲ್ ಮೀನುಗಾರಿಕಾ ಬಂದರಿನಿಂದ ಹೊರಟಿದ್ದರು. ಒಂಬತ್ತು ಸಿಬ್ಬಂದಿಗಳಲ್ಲಿ, ಮೂವರು ಕಾರೈಕಾಲ್ ಜಿಲ್ಲೆಯ ಕೊಟ್ಟುಚೆರ್ರಿಮೇಡು, ಐದು ಮಯಿಲಾಡುತುರೈ ಗ್ರಾಮಗಳಾದ ಮಡತುಕುಪ್ಪಂ, ಮರುತಂಪಲ್ಲಂ, ಕೀಝಮೊವರ್ಕರೈ ಮತ್ತು ಮೆಲಮೊವರ್ಕರೈ ಮತ್ತು ಒಬ್ಬರು ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂನವರು ಎಂದು ಗೊತ್ತಾಗಿದೆ.